ಕೊಟ್ಟಿಗೆಹಾರ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಅತ್ತಿಗೆರೆ ಗ್ರಾಮದ ಶಿವಣ್ಣ ಅವರಿಗೆ ಸಹಾಯಧನವನ್ನು ನೀಡಲಾಯಿತು.
ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿಗಳಾದ ಶಿವಾನಂದ ಅವರು ಸಹಾಯಧನವನ್ನು ವಿತರಣೆ ಮಾಡಿದರು. ವಲಯ ಮೇಲ್ವಿಚಾರಕರಾದ ಚಿತ್ತರಂಜನ್ ಅವರು ಉಪಸ್ಥಿತರಿದ್ದರು.










