ಮೊಸಳೆ ಪಾಲಾಗಿದ್ದ ಬಾಲಕನ ಶವ ಪತ್ತೆ!

70
firstsuddi

ಕಾರವಾರ : ಮೀನು ಹಿಡಿಯಲು ಕುಳಿತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದಿತ್ತು. ಇದೀಗ ಇಂದು ಬಾಲಕನ ಶವ ಪತ್ತೆಯಾಗಿದೆ.

ಭಾನುವಾರ ಈ ಘಟನೆ ನಡೆದಿದ್ದು, ಮೊಹಿನ್ ಮೆಹಬೂಬ್ ಅಲಿ(15) ಮೃತ ಬಾಲಕ. ದಾಂಡೇಲಿ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ. ಈ ವೇಳೆ ಮೊಸಳೆಯೊಂದು ಆತನನ್ನು ಎಳೆದೊಯ್ದಿತ್ತು.

ಬಾಲಕನಿಗಾಗಿ ಸ್ಥಳೀಯರು ತೆಪ್ಪದ ಮೂಲಕ ಮತ್ತು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್ ಗಳ ಮೂಲಕ ಹುಡುಕಾಟ ನಡೆಸಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ.ಇದೀಗ ಎರಡು ದಿನಗಳ ಬಳಿಕ ಬಾಲಕನ ಶವ ಪತ್ತೆಯಾಗಿದ್ದು, ಬಾಲಕನ ಒಂದು ಕೈ ಅನ್ನು ಮೊಸಳೆ ತಿಂದು ಹಾಕಿದೆ.

ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.