ಮ್ಯಾಟ್ರಿಮೊನಿಯಲ್ಲಿ ಕೇರಳ ಕುಟ್ಟಿ ಮಾತಿಗೆ ಮರುಳಾದ ಶಿಕ್ಷಕ – ಹಣದ ಜೊತೆಗೆ ಕೆಲಸವೂ ಕಳೆದುಕೊಂಡ….

71
firstsuddi

ಬಳ್ಳಾರಿ : ಕೇರಳ ಮೂಲದ ಯುವತಿಯ ಮಾತು, ಫೋಟೋಗೆ ಮರುಳಾಗಿ ಶಿಕ್ಷಕನೊಬ್ಬ ಲಕ್ಷ ಲಕ್ಷ ಹಣದ ಜೊತೆಗೆ ಕೆಲಸವನ್ನೂ ಕಳೆದುಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಸಂಡೂರು ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕ ದೇವೇಂದ್ರಪ್ಪ ಎಂಬುವವರೇ ಮೋಸಕ್ಕೊಳಗಾದ ಶಿಕ್ಷಕ. ಈ ಶಿಕ್ಷಕ ಮ್ಯಾಟ್ರಿಮೊನಿಯಲ್ಲಿ ಕೇರಳದ ಯುವತಿ ಜೊತೆ ಗೆಳೆತನ ಬೆಳೆಸಿದ್ದಾನೆ. ಯುವತಿ ಆರಂಭದಲ್ಲಿಯೇ ತನಗೆ ಎಂಬಿಬಿಎಸ್ ಓದಲು ಸಹಾಯ ಮಾಡುವಂತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ.

ಆರು ಸಾವಿರ ಹಣವನ್ನು ಯುವತಿಯ ಗೆಳೆತಿಯ ಅಕೌಂಟ್ ಗೆ ವರ್ಗಾವಣೆ ಮಾಡಿದ್ದಾನೆ. ಅಲ್ಲಿಂದ ಆರಂಭವಾದ ಈ ಹಣದ ವ್ಯವಹಾರ ಹೆಚ್ಚು ಕಡಿಮೆ 8 ರಿಂದ 10 ಲಕ್ಷದವರೆಗೂ ಹೋಗಿದ್ದು, ಯುವತಿಗಾಗಿ ಕೇರಳಕ್ಕೆ ಹೋಗಿ ಶಿಕ್ಷಕ ಖಾಲಿ ಕೈಯಲ್ಲಿ ವಾಪಸ್ ಬಂದಿದ್ದಾರೆ.

ಶಿಕ್ಷಕನನ್ನು ಒಮ್ಮೆ ಹೈದರಾಬಾದ್ ಗೆ ಕರೆಸಿದ್ದ ಯುವತಿ, ಅಲ್ಲಿ ಮತ್ತೊಂದು ಯುವತಿಯ ಪರಿಚಯ ಮಾಡಿಸಿದ್ದಾರೆ. ಅದು ಕೂಡ ಪೋನಿನಲ್ಲೇ. ಅಲ್ಲಿಯೂ ಒಂದಷ್ಟು ಹಣ ಕಳೆದುಕೊಂಡು ಬಂದಿದ್ದಾರೆ. ಇದೀಗ ಶಿಕ್ಷಕ ಅನ್ಯ ಮಾರ್ಗ ಕಾಣದೆ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಇದೀಗ ಬಳ್ಳಾರಿಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.