ವಿದೇಶಿ ಪ್ರಜೆಯೊಬ್ಬರು ಆಟೋದಲ್ಲಿ ಬಿಟ್ಟುಹೋಗಿದ್ದ 10 ಲಕ್ಷ ರೂ ಹಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ…

203
firstsuddi

ಬೆಂಗಳೂರು : ಹೃದಯ ಸಂಬಂಧಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದ ವಿದೇಶಿ ಪ್ರಜೆಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ 10 ಲಕ್ಷ ರೂ ಹಣವನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಮಾಲ್ಡೀವ್ಸ್ ನಿಂದ ಬಾಸ್ಕರ್ ಎಂಬುವವರು ಹೃದಯ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಂದಿದ್ದು, ಭಾಸ್ಕರ್ ಅವರು ತಪಾಸಣೆ ಮಾಡಿಸಿಕೊಂಡು ಶೇಷಾದ್ರಿಪುರಂನ ಲಾಡ್ಜ್ ಗೆ ಆಟೋದಲ್ಲಿ ಬಂದಿಳಿದಿದ್ದಾರೆ. ಈ ವೇಳೆ ಭಾಸ್ಕರ್ ಅವರು 1.5 ಲಕ್ಷ ಇಂಡಿಯನ್ ಕರೆನ್ಸಿ ಹಾಗೂ 12000 ಯುಎಸ್ ಡಾಲರ್(8.47 ಲಕ್ಷ) ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಆಟೋಚಾಲಕ ರಮೇಶ್ ಬಾಬು ಎಂಬುವವರು ಎಲ್ಲಾ ಹಣವನ್ನು ಶೇಷಾದ್ರಿಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಭಾಸ್ಕರ್ ಅವರು ಹಣ ಕಳೆದು ಹೋಗಿದೆ ಎಂದು ದೂರು ನೀಡಲು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಈ ವೇಳೆ ಆಟೋ ಚಾಲಕ ರಮೇಶ್ ಬಾಬು ಅವರು ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.