ಸರ್ಕಾರದಿಂದ ನೆರೆ ಪರಿಹಾರ ವಿಳಂಬ, ರಾಜ್ಯದ ಜನತೆಯಲ್ಲಿ ಕ್ಷಮೆ ಕೋರಿದ ಸಚಿವ ಬಿ. ಶ್ರೀರಾಮುಲು…

229
firstsuddi

ಬೆಂಗಳೂರು : ರಾಜ್ಯದ ನೆರೆ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಲು ವಿಳಂಬವಾಗುತ್ತಿರುವುದಕ್ಕೆ ನಾವು ರಾಜ್ಯದ ಜನತೆಯಲ್ಲಿ ಕ್ಷಮೆ ಕೊರುತ್ತೇವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ನೆರೆ ಸಮಸ್ಯೆಗೆ ಪರಿಹಾರ ಬರುವುದು ತಡವಾಗಿದೆ. ಅದನ್ನು ನಾವು ಒಪ್ಪಲೇಬೇಕು. ಇದುವರೆಗೂ ಎಲ್ಲ ವಿಧದ ಪರಿಹಾರ ಹಣ ತುರ್ತಾಗಿ ಬರುತ್ತಿತ್ತು. ಆದರೆ ಈ ಬಾರಿ ಪರಿಹಾರ ಹಣ ಬರಲು ವಿಳಂಬವಾಗುತ್ತಿರುವುದಕ್ಕೆ ಮೊತ್ತ ದೊಡ್ಡದಾಗಿರುವುದು ಕಾರಣವಾಗಿರಬಹುದು. ನಾವು ಸರಿ ಸುಮಾರು 39 ಸಾವಿರ ಕೋಟಿ ಮೊತ್ತದ ಪರಿಹಾರ ಹಣಕ್ಕೆ ಬೇಡಿಕೆ ನೀಡಿದ್ದೇವೆ.  ಆದಷ್ಟು ಬೇಗ ಪರಿಹಾರ ಬಿಡುಗಡೆಯಾಗುತ್ತದೆ. ನಿರೀಕ್ಷೆಗೂ ಮೀರಿ ವಿಳಂಬವಾಗಿರುವುದಕ್ಕೆ ನಾವು ರಾಜ್ಯದ ಜನತೆಯಲ್ಲಿ ಕ್ಷಮೆ ಕೋರುತ್ತೇವೆ. ನಮಗೆ ಬಡ ಜನರು ಹಾಗೂ ನೆರೆ ಸಂತ್ರಸ್ಥರು ಮುಖ್ಯ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದು ಬೇಡ ಎಂದರು.