ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ ನಟಿ ಅದಾ ಶರ್ಮಾ.

55
firstsuddi

ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ನಟಿ ಅದಾ ಶರ್ಮಾ ಅವರು ಖರೀದಿಸಿದ್ದಾರೆ. ಈ ಮೂಲಕ ನೀವು ನನ್ನ ಹೃದಯದಲ್ಲಿ ಇದ್ದೀರಿ ಎನ್ನುವಂತಹ ಸಂದೇಶವನ್ನೂ ಅವರು ಕೊಟ್ಟಿದ್ದಾರೆ.

ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ವಾಸ ಮಾಡುತ್ತಿದ್ದರು. 2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್ ನ ರೂಮ್ ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ಬಳಿಕ ಈ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಸುಶಾಂತ್ ಸಿಂಗ್ ಆತ್ಮ ಅಲ್ಲಿದೆ ಎಂದೂ ಹಬ್ಬಿಸಲಾಗಿತ್ತು. ಇದರಿಂದ ಯಾರೊಬ್ಬರೂ ಈ ಮನೆಯಲ್ಲಿ ಉಳಿದುಕೊಳ್ಳಲು ಮುಂದೆ ಬಂದಿರಲಿಲ್ಲ. ಹೀಗಾಗಿ, ಇದರ ಮಾಲೀಕರು ಈ ಅಪಾರ್ಟ್​ಮೆಂಟ್​ನ ಮಾರುವ ನಿರ್ಧಾರಕ್ಕೆ ಬಂದಿದ್ದರು. ನಂತರ ಅದಾ ಶರ್ಮಾ ಅವರು ಇದನ್ನು ಖರೀದಿ ಮಾಡಿದ್ದಾರೆ.

ಸುಶಾಂತ್ ವಾಸವಾಗಿದ್ದು 4 ಬಿಎಚ್​ಕೆ ಮನೆ. ಸಮುದ್ರಕ್ಕೆ ಮುಖ ಮಾಡಿ ಈ ಮನೆ ಇದ್ದು, 2500 ಸ್ಕ್ವೇರ್ ಫೀಟ್ ಇದೆ. 6ನೇ ಅಂತಸ್ತಿನಲ್ಲಿ ಈ ಮನೆ ಇದೆ. ಇಲ್ಲಿಯೇ ಹಲವಾರು ವರ್ಷಗಳಿಂದ ಸುಶಾಂತ್ ಸಿಂಗ್ ವಾಸವಿದ್ದರು. 2022ರಲ್ಲಿ ಈ ಮನೆ ಮಾರಾಟದ ಬಗ್ಗೆ ಸುದ್ದಿ ಹರಡಿತ್ತು.