ಬಳ್ಳಾರಿ: ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿರುವ ಘಟನೆ ಜಿಲ್ಲೆಯ ತೋರಣಗಲ್ ಪಟ್ಟಣದ ಘೋರ್ಪಡೆ ನಗರದಲ್ಲಿ ನಡೆದಿದೆ.
ನಾಗರಾಜ್ ನಾಯ್ಕ (32) ಹಲ್ಲೆಗೊಳಗಾದ ಪುರಸಭೆ ಸದಸ್ಯ. ಶಿವಕುಮಾರ್ ಎಂಬಾತ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದರು. ಅದೇ ವಿಚಾರವಾಗಿ ಇಬ್ಬರಿಗೂ ಮತ್ತೆ ಗಲಾಟೆಯಾಗಿ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ನಾಗರಾಜ್ನ ತಲೆ, ಬೆನ್ನು ಹಾಗೂ ಕೈಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಆತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










