ಹಾಸನ : ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುತ್ತಿದೆ : ಹೆಚ್.ಕೆ.ಕುಮಾರಸ್ವಾಮಿ.

527
firstsuddi

ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರು, ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಜೆಡಿಎಸ್ ನಾಯಕರು ಭಾಗವಹಿಸುವುದಿಲ್ಲ. ಬಿಜೆಪಿ ಒಂದು ವಾರದೊಳಗೆ ಬಹಮತ ಸಾಬೀತು ಪಡಿಸುವುದಾಗಿ ತಿಳಿಸಿದೆ. ಅದನ್ನು ನೋಡಿಕೊಂಡು ನಮ್ಮ ಪಕ್ಷ ಮುಂದಿನ ಕಾನೂನು ಹೋರಾಟ ನಡೆಸಲಿದೆ. ಮೈತ್ರಿ ಸರ್ಕಾರ ಪತನವಾಗಿರುವುದು ನೋವಿನ ವಿಚಾರವಾಗಿದ್ದು, ಇದರಿಂದ ನಾವು ಧೃತಿಗೆಡುವುದಿಲ್ಲ. ಹೆಚ್. ವಿಶ್ವನಾಥ್ ಅವರು ಸೇರಿದಂತೆ ಜೆಡಿಎಸ್‍ನ ಅತೃಪ್ತ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಹೆಚ್. ವಿಶ್ವನಾಥ್ ಅವರು ಒಬ್ಬ ಹಿರಿಯ ಮುತ್ಸದಿ ರಾಜಕಾರಣಿಯಾಗಿ ಅವರು ಈ ರೀತಿ ಮಾಡಬಾರದಿತ್ತು. ಅವರು ಯಾವಾ ಆಮಿಷಕ್ಕೆ ಗುರಿಯಾಗಿದ್ದಾರೋ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.