ಬೆಂಗಳೂರು : ಅಪ್ತಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಗೋವಿಂದರಾಜನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ನನ್ನು ಬಂಧಿಸಲಾಗಿದೆ.
ಪವನ್ ದ್ಯಾವಣ್ಣನವರ್ ಬಂದಿತ ಕಾನ್ಸ್‌ಟೇಬಲ್. ಅಪ್ರಾಪ್ತೆ ಚಾಮರಾಜನಗರ ಮೂಲದ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಹೀಗಾಗಿ ಮನೆ ತೊರೆದು ಬಂದಿದ್ದ ಸಂತ್ರಸ್ತೆ ಜುಲೈ 27ರಂದು ಗೋವಿಂದರಾಜನಗರದ ರಸ್ತೆ ಬದಿಯ ಪಾರ್ಕ್ ನಲ್ಲಿ ಓಡಾಡುತ್ತಿದ್ದಳು. ಈ ವೇಳೆ ಕಾನ್ಸ್‌ಟೇಬಲ್ ಸಹಾಯ ಮಾಡುವ ನೆಪದಲ್ಲಿ ಬಾಲಕಿ ಹತ್ತಿರ ಹೋಗಿದ್ದ. ಬಳಿಕ ಆಕೆಯನ್ನು ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಮರುದಿನ ಬಾಲಕಿಯನ್ನು ವಾಪಸ್ ಊರಿಗೆ ಕಳಿಸಿದ್ದ.
ಬಾಲಕಿ ಮನೆಗೆ ಹೋದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ಗೋವಿಂದರಾಜನಗರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಕಾನ್ಸ್‌ಟೇಬಲ್ ನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಕಾನ್ಸ್‌ಟೇಬಲ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










