ಅಭಿಮಾನಿಯಿಂದ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರಿಗೆ ತುಲಾಭಾರ ಸೇವೆ…

214
firstsuddi

ಧಾರವಾಡ : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರಿಗೆ ಅಭಿಮಾನಿಯಿಂದ ನುಗ್ಗಿಕೇರೆ ಹನುಮಂತ ದೇವಾಲಯದಲ್ಲಿ ಹಾಲು ತುಪ್ಪ ತುಲಾಭಾರ ಮಾಡಿಸಲಾಗಿದ್ದು, ಅಭಿಷೇಕ್ ಅವರು ತಮ್ಮ “ಅಮರ್” ಚಿತ್ರದ ಪ್ರಚಾರಕ್ಕೆಂದು ಧಾರವಾಡಕ್ಕೆ ಭೇಟಿ ನೀಡಿದ್ದು, ಈ ವೇಳೆ ನಾರಾಯಣ್ ಕಲಾಲ್ ಎಂಬ ಅಭಿಮಾನಿಯ ಅಪೇಕ್ಷೆಯಿಂದ ಸುಮಲತಾ ಅಂಬರೀಶ್ ಅವರಿಗೆ 75 ಕೆ.ಜಿ ಸಕ್ಕರೆ, 15 ಕೆಜಿ ತುಪ್ಪದಿಂದ ತುಲಭಾರ ಸೇವೆ ಮಾಡಿಸಿದ್ದು, ಹಾಗೂ ಅಭಿಷೇಕ್ ಅವರಿಗೆ 100 ಕೆಜಿ ಸಕ್ಕರೆ, 15ಕೆಜಿ ತುಪ್ಪದಿಂದ ತುಲಾಭಾರ ಸೇವೆಯನ್ನು ಮಾಡಿಸಿದ್ದಾರೆ. ತುಲಾಭಾರ ಸೇವೆ ಬಳಿಕ ಮಾತನಾಡಿದ ಅಭಿಷೇಕ್ ಅಂಬರೀಶ್ ಅವರು ತುಲಾಭಾರ ಸೇವೆ ಮಾಡಿಸುವ ಕಾರ್ಯಕ್ರಮ ಇರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿಗೆ ಬಂದ ಬಳಿಕ ನನಗೆ ತಿಳಿದಿದೆ. ತುಲಾಭಾರ ಸೇವೆ ಸಲ್ಲಿಸಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ. ನಾರಾಯಣ್ ಕಲಾಲ್ ಅವರು ಅಂಬರೀಶ್ ಅವರ ಪಕ್ಕಾ ಅಭಿಮಾನಿಯಾಗಿದ್ದು, ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ತುಲಾಭಾರ ಸೇವೆ ಮಾಡಿಸಿದ್ದಾರೆ ಎಂದು ಹೇಳಿದರು.