ಆ್ಯಸಿಡ್ ದಾಳಿ ಪ್ರಕರಣ ; ಪೊಲೀಸರ ಮುಂದೆ ಆರೋಪಿ ನಾಗೇಶ್ ಹೇಳಿದ್ದೇನು?

63
firstsuddi

ಬೆಂಗಳೂರು : ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ನಾಗೇಶ್ ಪೊಲೀಸರ ಮುಂದೆ ಸ್ಟೋಟಕ ಹೇಳಿಕೆ ನೀಡಿದ್ದಾನೆ. ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿನೇ ಕಾರಣ ಎಂದು ಹೇಳಿದ್ದಾನೆ.

ನಾನು ಆ್ಯಸಿಡ್ ಹಾಕಬಾರದು ಅಂತಲೇ ಇದ್ದೆ. ಘಟನೆ ಹಿಂದಿನ ದಿನ ಬಾಯಿ ಮಾತಿಗೆ ಆಸಿಡ್ ಹಾಕ್ತೀನಿ ಎಂದಿದ್ದೆ. ಆದ್ರೆ ಯುವತಿ ಅದನ್ನ ಅವರ ಪೋಷಕರಿಗೆ ಹೇಳಿದ್ದಾಳೆ. ಅವರ ತಂದೆ ನನ್ನ ಅಣ್ಣನಿಗೆ ಹೇಳಿದ್ರು. ನನ್ನ ಅಣ್ಣ ನನಗೆ ಬೈದಿದ್ದ. ಇದರಿಂದ ಕೋಪಗೊಂಡು ಆ್ಯಸಿಡ್ ಹಾಕಿಯೇ ಬಿಡೋಣ ಅಂತಾ ತೀರ್ಮಾನ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.

ಸಂತ್ರಸ್ತೆ ತಾಯಿ ಲಕ್ಷಮ್ಮ ಹೇಳಿಕೆ :

ಅವನಿಗೆ ಕಾಲಿಗೆ ಗುಂಡೇಟು ಹಾಕಿದ್ದು ಸಮಾಧಾನ ತಂದಿಲ್ಲ. ನನ್ನ ಮಗಳು ಎಷ್ಟು ನೋವು ಅನುಭವಿಸಿದ್ದಾಳೆ. ಅಂಥದೇ ನೋವು ಅವನು ಅನುಭವಿಸಬೇಕು. ಅವನು ನರಳಿ ನರಳಿ ಸಾಯಬೇಕು. ಗುಂಡು ಹೊಡೆಯೋದು ಬೇಡ. ಅವನಿಗೆ ಗುಂಡು ಹೊಡೆದಿದ್ದು ನನಗೆ ಸಮಾಧಾನ ತಂದಿಲ್ಲ. ಮಗಳಿಗೆ ಮೂರು ಸರ್ಜರಿ ಆಗಿದೆ. ಇವತ್ತು ನಾಲ್ಕನೇ ಸರ್ಜರಿಗೆ ಕರೆದುಕೊಂಡು ಹೋಗ್ತಿದ್ದಾರೆ ಎಂದು ಸಂತ್ರಸ್ತೆ ತಾಯಿ ಲಕ್ಷಮ್ಮ ಕಣ್ಣೀರು ಹಾಕಿದ್ದಾರೆ.