ಇಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಚರ್ಚೆ – ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜು…

78
firstsuddi

ಬೆಳಗಾವಿ : ವಿಪಕ್ಷಗಳ ವಿರೋಧದ ನಡುವೆಯೂ ಬಿಜೆಪಿ ನಿನ್ನೆ ಮತಾಂತರ ನಿಷೇಧ ಮಸೂದೆ ಮಸೂದೆ ಮಂಡಿಸಿದೆ. ಇಂದು ಮಸೂದೆ ಕುರಿತ ಚರ್ಚೆಗೆ ಅವಕಾಶ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಇಂದು ‘ಮತಾಂತರ’ ಅಲ್ಲೋಲಕಲ್ಲೋಲ ನಡೆಯಲಿದೆ. ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.

ನಿನ್ನೆ ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಲೇ ಸ್ಪೀಕರ್ ಕಾಗೇರಿ ವಿಧೇಯಕ ಮಂಡಿಸೋಕೆ ಹೇಳಿದ್ರು. ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕವನ್ನ ಮಂಡಿಸಿದ್ರು. ಈ ಕ್ಷಿಪ್ರಗತಿಯ ವಿಧೇಯಕ ಮಂಡನೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಸಿದ್ದರಾಮಯ್ಯ ಇದು ಸಂವಿಧಾನ ವಿರೋಧಿ ಅಂದ್ರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕದ್ದು ಮುಚ್ಚಿ ಬಿಲ್ ಮಂಡಿಸ್ತಿದೆ ಅಂತಾ ಆಕ್ರೋಶ ಹೊರಹಾಕಿ ಬಿಲ್ ಹರಿದು ಹಾಕಿದ್ರು.

ಡಿಕೆಶಿ ಕದ್ದು ಮುಚ್ಚಿ ಹೇಳಿಕೆಗೆ ಸ್ಪೀಕರ್ ಅಸಮಾಧಾನ ಹೊರಹಾಕಿದ್ರು. ಈ ಮೊದಲೇ ಎಲ್ಲರಿಗೂ ಬಿಲ್ ಕೊಟ್ಟಿದ್ದೇವೆ, ಮಂಡಿಸೋದು ಇದೆ ಅಂತಾನೂ ಹೇಳಿದ್ದೇವೆ ಈಗ ಬಂದು ಹೀಗೆ ಗಲಾಟೆ ಮಾಡಿದ್ರೆ ಹೇಗೆ ಅಂತಾ ಪ್ರಶ್ನಿಸಿದ್ರು. ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಬಿಲ್ ಕುರಿತು ಇಂದು ಚರ್ಚೆಗೆ ಅವಕಾಶ ಕೊಡೋದಾಗಿ ಸ್ಪೀಕರ್ ಹೇಳಿದ್ರು. ಅದಕ್ಕೊಪ್ಪಿ ಕಾಂಗ್ರೆಸ್ ಸದಸ್ಯರು ಸುಮ್ಮನಾಗಿದ್ರು. ಇತ್ತ ಸಚಿವ ಆರ್.ಅಶೋಕ್ ಅತಿವೃಷ್ಠಿ ಮೇಲಿನ ಚರ್ಚೆಗೆ ಉತ್ತರ ಕೊಡ್ತಾ ಇದ್ರು. ಆದ್ರೆ ಏಕಾ ಏಕಿ ಎದ್ದು ನಿಂತು ಸಿದ್ದರಾಮಯ್ಯ, ಇದು ಸಂವಿಧಾನ ಬಾಹಿರ ಸರ್ಕಾರ, ಇವ್ರ ಉತ್ತರ ನಾವ್ ಕೇಳಲ್ಲ ಅಂತಾ ಸಭಾತ್ಯಾಗ ಮಾಡಿದ್ರು.

ನಿನ್ನೆ ಬಿಲ್ ಮಂಡನೆ ವಿರೋಧಿಸಿ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಇಂದು ಆರಂಭದಿಂದಲೇ ಸಮರ ಸಾರಲು ಸಜ್ಜಾಗಿದೆ. ಈಗಾಗಲೇ ತನ್ನೆಲ್ಲಾ ಶಾಸಕರಿಗೆ ಕಡ್ಡಾಯವಾಗಿ ಸದನದಲ್ಲಿರಲು ಕಾಂಗ್ರೆಸ್ ಬುಲಾವ್ ನೀಡಿದೆ. ಒಟ್ಟಿನಲ್ಲಿ ಈ ವಿಚಾರವಾಗಿ ಇಂದು ಕೂಡ ಬೆಳಗಾವಿ ಅಧಿವೇಶನ ಕಾವೇರಲಿದೆ.