ಬೆಂಗಳೂರು : ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿದ್ದು, ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸ ಆಗುತ್ತಿದೆ. ಹಂತ ಹಂತವಾಗಿ ಅವರನ್ನು ಕರೆತರಲಾಗುತ್ತಿದ್ದು, ಈವರೆಗೆ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ನೋಡಲ್ ಅಧಿಕಾರಿ ಮನೋಜ್ ರಾಜನ್ ಅವರು ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಫೆ.27ರಂದು 30, ಫೆ.28ರಂದು 7, ಮಾ. 1ರಂದು 18, ಮಾ.2ರಂದು 31, ಮಾ.3ರಂದು 104, ಹಾಗೂ ನಿನ್ನೆ 92 ಕನ್ನಡಿಗರು ಭಾರತಕ್ಕೆ ಮರಳಿದ್ದಾರೆ.










