ಉಡುಪಿ : ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ತಂದೆಯಿಂದ ಮಗನ ಕೊಲೆ…

277
firstsuddi

ಉಡುಪಿ : ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಮಗನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಿಯ್ಯಾರು ಮಂಗಳಪಾದೆ ಎಂಬಲ್ಲಿ ನಡೆದಿದೆ. ವಿವಿಯನ್ ಡಿಸೋಜ(24) ಮೃತ ದುರ್ದೈವಿ ಎಂದು ಗುರುತಿಲಾಗಿದ್ದು, ವಿಕ್ಟರ್ ಡಿಸೋಜ(58) ಹತ್ಯೆಗೈದ ತಂದೆ ಎನ್ನಲಾಗಿದೆ. ವಿಕ್ಟರ್ ಡಿಸೋಜ ಅವರು ಪ್ರತಿದಿನ ಕುಡಿದು ಬಂದು ಮನೆಯವರ ಬಳಿ ಕ್ಲುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು. ಅದರಂತೆ ನಿನ್ನೆ ತಂದೆ ಮಗನ ಮಧ್ಯೆ ಜಗಳವಾಗಿದ್ದು, ಮಗನ ತೊಡೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಅಧಿಕ ರಕ್ತಸ್ರಾವವಾಗಿ ವಿವಿಯನ್ ಅವರು ಪ್ರಜ್ಞೆತಪ್ಪಿದ್ದು, ಕೂಡಲೇ ತಾಯಿ ಮತ್ತೊಬ್ಬ ಮಗನಿಗೆ ಕರೆ ಮಾಡಿ ತಿಳಿಸಿದ್ದಾರೆ. ಸಹೋದರ ಮನೆಗೆ ಬಂದ ಕೂಡಲೇ ವಿವಿಯನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವವಾದ ಕಾರಣ ವಿವಿಯನ್ ಅವರು ಮೃತಪಟ್ಟಿದ್ದು, ಕಾರ್ಕಳ ನಗರ ಠಾಣಾ ಪೊಲೀಸರು ಆರೋಪಿ ವಿಕ್ಟರ್ ಡಿಸೋಜ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.