ಕಾರ್ಕಳ: ಸಮೀಪದ ಮುಳ್ನೂರು ಘಾಟ್ ಬಳಿ ಇಂದು ಸಂಜೆ ನಡೆದ ಭೀಕರ ಅಫಘಾತದಲ್ಲಿ ಟೂರಿಸ್ಟ್ ಬಸ್ಸೊಂದು ಬಂಡೆಗೆ ಡಿಕ್ಕಿ ಹೊಡೆದು 9 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.ಮೈಸೂರಿನಿಂದ ಖಾಸಗಿ ಕಂಪೆನಿಯು ಈ ಪ್ರವಾಸವನ್ನು ಆಯೋಜಿಸಿತ್ತು ಎಂದು ಹೇಳಲಾಗಿದ್ದು, ಬಸ್ ಮುಳ್ನೂರ್ ಘಾಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಂಡೆಗೆ ಢಿಕ್ಕಿ ಹೊಡೆದಿದೆ. ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಮೃತರಲ್ಲಿ 6 ಪುರುಷರು ಮತ್ತು 3 ಮಹಿಳೆಯರು ಸೇರಿದ್ದಾರೆ.










