ಕೆಎಂಎಫ್ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿದೆ : ಪ್ರತಾಪ್ ಸಿಂಹ

50
firstsuddi

ಮೈಸೂರು : ಕೆಎಂಎಫ್ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಕೆಎಂಎಫ್ ನಲ್ಲಿ ಅಮುಲ್ ವಿಲೀನ ಎಂಬ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೂಲ್ ಮತ್ತು ಕೆಎಂಎಫ್‍ನ್ನು ವಿಲೀನ ಮಾಡುತ್ತಿಲ್ಲ. ಈ ತರ ಸುಳ್ಳು ಅಪಪ್ರಚಾರವನ್ನು ಮಾಡಬೇಡಿ. ಇಷ್ಟು ದಿನದವರೆಗೆ ಹಿಂದಿ ಹೇರಿಕೆ ಅಂದರು, ಈಗ ಅಮುಲ್ ಹೇರಿಕೆ ಎಂದು ಹೇಳುತ್ತಿದ್ದಾರೆ ಎಂದರು.

ಹೆರಿಟೇಜ್, ಡೂಡ್ಲ, ಆರೋಕ್ಯ ಎಂಬ ಹಾಲಿನ ಬ್ರಾಂಡ್ ಗಳು ನಂದಿನಿಯ ಅಕ್ಕತಂಗಿಯರಾ? ಅಥವಾ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಬಂದ ಸೊಸೆ, ಅಳಿಯಂದಿರಾ? ಇಷ್ಟು ವರ್ಷದಿಂದ ಈ ಬ್ರಾಂಡ್ ಗಳು ಕರ್ನಾಟಕದಲ್ಲಿ ಮಾರಾಟ ಆಗುತ್ತಿಲ್ವಾ? ಬಿಜೆಪಿ ಬಂದ ಮೇಲೆ ಇವು ರಾಜ್ಯಕ್ಕೆ ಬಂದವಾ? ಹಾಲು ಉತ್ಪಾದನೆ ಬಗ್ಗೆ, ನಂದಿನಿ ಬಗ್ಗೆ, ಕರ್ನಾಟಕ ಮಿಲ್ಕ್ ಫೆಡರೇಷನ್ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿರುವಂಥದ್ದು ಬಿಜೆಪಿಯವರು. ಮಾಜಿ ಸಿಎಂ ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನವನ್ನು ಕೊಟ್ಟಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ರೋತ್ಸಾಹ ಧನವನ್ನು ಐದು ರೂಪಾಯಿಗೆ ಏರಿಸಿದ್ದರು ಎಂದರು.

ಯಾವ ಹಸು ಹಾಲು ಕೊಡುತ್ತಾದೋ ಅದನ್ನು ಕಡಿಯುವವರ ಪರ ಇರುವುದು ಸಿದ್ದರಾಮಯ್ಯ. ಸಿದ್ದರಾಮಯ್ಯರಿಗೆ ಅಧಿಕಾರ ಕೊಟ್ಟರೆ ಗೋವು ತಿನ್ನೋರೆ ಜಾಸ್ತಿ ಆಗುತ್ತಾರೆ. ಸಿದ್ದರಾಮಯ್ಯ ಅವರು ಗೋಹತ್ಯೆ ಮಾಡುವವರ ಪರ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಗುಡುಗಿದರು.