ಕೊಡಗು : ವರ್ತಕನ ಮೇಲೆ ಗುಂಡಿನ ದಾಳಿ…

60
firstsuddi

ಕೊಡಗು: ನಿವೃತ ಎಸ್ಪಿ ಪುತ್ರನೊಬ್ಬ ವರ್ತಕನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತಿ ಗ್ರಾಮದಲ್ಲಿ ನಡೆದಿದೆ.

ರಂಜನ್ ಚಿಣ್ಣಪ್ಪ ಎಂಬಾತ ಗುಂಡು ಹಾರಿಸಿದ ವ್ಯಕ್ತಿ. ಸಿದ್ದಾಪುರ ರಸ್ತೆಯ ವರ್ತಕ ಕೆ.ಬೋಪಣ್ಣ ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಂಜನ್‍ಗೆ ಸೇರಿದ ಮನೆಯ ಮುಂಭಾಗದ ಅಂಗಡಿ ಮಳಿಗೆಯಲ್ಲಿ ಬೋಪಣ್ಣ ಮತ್ತು ಆತನ ಪಾಲುದಾರರು ಅಡಿಕೆ ಮಂಡಿಯನ್ನು ನಡೆಸುತ್ತಿದ್ದರು. ಅಂಗಡಿ ಮಳಿಗೆಯನ್ನು ಖಾಲಿ ಮಾಡುವಂತೆ ಈ ಹಿಂದೆ ರಂಜನ್ ಸೂಚಿಸಿದ್ದ. ಇದಕ್ಕೆ ಬೋಪಣ್ಣ ಕಾಲಾವಕಾಶವನ್ನು ಕೇಳಿದ್ದರು ಎನ್ನಲಾಗಿದೆ. ಮತ್ತೆ ರಂಜನ್ ಬೋಪಣ್ಣರವರ ಅಂಗಡಿಗೆ ತೆರಳಿ ಖಾಲಿ ಮಾಡುವಂತೆ ಕೇಳಿಕೊಂಡಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಂಜನ್ ತನ್ನ ಬಳಿ ಇದ್ದ ರಿವಾಲ್ವಾರ್ ನಿಂದ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ.

ಘಟನೆ ಕುರಿತು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ರಾಜನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.