ಚರ್ಚೆ ನಡೆಸಿ ದೇವಸ್ಥಾನಗಳ ತೆರವಿಗೆ ತೀರ್ಮಾನ : ಕೋಟ ಶ್ರೀನಿವಾಸ ಪೂಜಾರಿ.

78
firstsuddi

ಉಡುಪಿ : ದೇವಾಲಯಗಳ ಪ್ರವೇಶಕ್ಕೆ ಒಂದೇ ಸಲ ಅವಕಾಶಗಳನ್ನು ಕೊಟ್ಟರೆ ಜನಜಂಗುಳಿ ಆಗುವ ಸಾಧ್ಯತೆಗಳಿರುವುದರಿಂದ ಸ್ವಲ್ಪ ದಿನಗಳ ಬಳಿಕ ದೇವಾಲಯ ತೆರೆಯಬಹುದಾ ಎಂದು ಸರ್ಕಾರ ಆಲೋಚನೆ ಮಾಡುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಆದಷ್ಟು ಬೇಗ ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲೆಯ ಬೈಂದೂರು ತಾಲ್ಲೂಕಿನ ಕೊಲ್ಲೂರು ಮೂಕಾಂಬಿಕಾ ವತಿಯಿಂದ ಕೊಲ್ಲೂರು ಗ್ರಾ.ಪಂ ವ್ಯಾಪ್ತಿಯ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 550 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಜೂನ್ 14ರ ನಂತರ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆಗಳು ಆರಂಭವಾಗುತ್ತದೆ. ಶೇಕಡಾ ಐದಕ್ಕಿಂತ ಕಡಿಮೆ ಪಾಸಿಟಿವಿಟಿ ಇದ್ರೆ ಬೇಗ ಅನ್ ಲಾಕ್ ಆಗುತ್ತದೆ. ಏಕಾಏಕಿ ದೇವಸ್ಥಾನಗಳು ತೆರೆದರೆ ಜನಜಂಗುಳಿ ಜಾಸ್ತಿಯಾಗುವ ಸಾಧ್ಯತೆಯಿದೆ. ಸ್ವಲ್ಪ ದಿನ ಬಿಟ್ಟು ದೇವಾಲಯ ತೆರೆಯುವ ಬಗ್ಗೆ ಚಿಂತನೆ ಇದೆ. ಆದಷ್ಟು ಬೇಗ ದೇವಸ್ಥಾನ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.