ಚಿಕ್ಕಮಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ಇಂದು ದೇಶಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿರುವುದನ್ನು ವಿರೋಧಿಸಿ ರಾಜ್ಯದ ಕೆಲವೆಡೆ ಗೋ ಬ್ಯಾಕ್ ಟ್ರಂಪ್ ಚಳುವಳಿ ನಡೆಯುತ್ತಿದ್ದು, ಈ ಹಿನ್ನೆಲೆ, ಗೋ ಬ್ಯಾಂಕ್ ಎಂದು ಹೇಳುತ್ತಿರುವವರಿಗೆ ಸಚಿವ ಸಿ.ಟಿ. ರವಿ ಅವರು ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ. ಹುಟ್ಟುವಾಗಲೇ ದ್ವೇಷ ಹೊತ್ತುಕೊಂಡು ಬಂದವರು ಈ ರೀತಿ ವಿರೋಧ ವ್ಯಕ್ತಪಡಿಸುತ್ತಾರೆ. ಅವರಿಗೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು. ಆನೆ ಹೋಗುತ್ತಿರುತ್ತದೆ ಡ್ಯಾಶ್ ಡ್ಯಾಶ್ ಡ್ಯಾಶ್ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಸಿ.ಟಿ. ರವಿ ಕ್ಯಾಸೀನೋ ಆಡಿರಬೇಕು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಅವರು ದೊಡ್ಡವರು. ಅವರಿಗೆ 70 ವರ್ಷ ಕ್ರಾಸ್ ಆಗಿದೆ. ಯಾರ್ಯಾರು ಮೂರು ಮೂರು ದಿನ ಹೊರಗೆ ಬರುತ್ತಿರಲಿಲ್ಲ. ಯಾರ್ಯಾರ ಫ್ರೆಂಡ್ಸ್ ಸರ್ಕಾಲ್ ಹೇಗಿದೆ. ತಟ್ಟೋಕೆ ಕೂತರೆ ಹೊರಗೆ ಬರದೇ ಇರುವವರು ಯಾರು ಎಂದು ಸಿದ್ದರಾಮಯ್ಯ ಅವರು ಅವಲೋಕನ ಮಾಡಿಕೊಳ್ಳಲಿ. ಅವಲೋಕನ ಮಾಡಿಕೊಂಡಾಗ ಆರೋಪ ಮಾಡುವವರು ಎಷ್ಟು ಸಾಚಾ ಎಂದು ತಿಳಿಯುತ್ತದೆ ಎಂದು ಸಚಿವ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.










