ಚಿಕ್ಕಮಗಳೂರು : ಸಿದ್ದರಾಮಯ್ಯನವರಿಗೆ ಅವರ ಮೂಲದ ಬಗ್ಗೆ ಡೌಟ್ ಇದೆ : ಮಾಜಿ ಸಿಎಂ ಸಿದ್ದು ವಿರುದ್ದ ಸಿ.ಟಿ.ರವಿ ವ್ಯಂಗ್ಯ…

197

 

ಚಿಕ್ಕಮಗಳೂರು : ಸಿದ್ದರಾಮಯ್ಯ ಅವರದ್ದು ಜಿನ್ನಾ ವಾದ ಆಗುತ್ತೆ, ಗಾಂಧಿ ವಾದ ಅಲ್ಲ ಎಂದು ಬಿಜಿಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರದ್ದು ಜಿನ್ನಾ ವಾದ ಆಗುತ್ತೆ, ಗಾಂಧಿವಾಗ ಆಗಲ್ಲ, ಒಮ್ಮೆ ನಾನೂ ಹಿಂದೂ ಎಂದು ಹೇಳುತ್ತಾರೆ. ಆಮೇಲೆ ನನಗೂ ಹಿಂದುಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಒಮ್ಮೊಮ್ಮೆ ನಂದು ಗಾಂಧಿ ಹಿಂದುತ್ವ ಎಂದು ಹೇಳುತ್ತಾರೆ. ಗಾಂಧಿ ದನದ ಮಾಂಸ ತಿನ್ನಿ ಎಂದು ಹೇಳಿದ್ರಾ..? ಗಾಂಧಿ ಗೋ ಹತ್ಯೆ ನಿಷೇಧ ಬಯಸಿದವರು. ಗೋ ಮಾಂಸ ತಿನ್ನುತ್ತೀನಿ ಅನ್ನುವವರು ಗಾಂಧಿ ಹಿಂದುತ್ವ ಹೇಗಾಗುತ್ತದೆ ಎಂದರು.
ಇದೇ ವೇಳೆ ಏಪ್ರಿಲ್ ಬಳಿಕ ಸಿಎಂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುತ್ತಾರೆ ಎಂದು ಆರ್.ಎಸ್.ಎಸ್. ಮೂಲಗಳಿಂದ ತಿಳಿದು ಬಂದಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವಾಗ ಆರ್.ಎಸ್.ಎಸ್. ಗೆ ಬಂದರು ಗೊತ್ತಿಲ್ಲ. ಆರ್.ಎಸ್.ಎಸ್. ಮೂಲ ತಿಳಿಯಬೇಕೆಂದರೆ ಅವರು ಇಲ್ಲಿಗೆ ಬರಬೇಕು. ಮೊದಲು ಆರ್.ಎಸ್.ಎಸ್. ಗೆ ಬರಲಿ ಆಮೇಲೆ ಮೂಲ ತಿಳಿಯಲಿ. ಕೆಲವು ವೇಳೆ ಅವರಿಗೆ ಅವರ ಮೂಲದ ಬಗ್ಗೆ ಡೌಟ್ ಇದೆ. ಸಿದ್ದರಾಮಯ್ಯ ಅವರಿಗೆ ಬಹಳ ಸಲ ತನ್ನದೇ ಮೂಲದ್ದೇ ಸಂಶಯ ಕಾಡುತ್ತಿರುತ್ತದೆ. ಅಪ್ಪಟ ರಾಷ್ಟ್ರ ಭಕ್ತನಿಗೆ ಆರ್.ಎಸ್.ಎಸ್. ಮೂಲ ಗೋತ್ತಾಗೋದು ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್.ಎಸ್.ಎಸ್ ಮೂಲ ಗೊತ್ತಾಗುವುದಿಲ್ಲ. ಅವರಿಗೆ ದಿನಾ ಕಸಲು ಬೀಳುತ್ತದೆ. ರಾತ್ರಿ ಬಿದ್ದ ಕನಸನ್ನು ಬೆಳಿಗ್ಗೆ ಬಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.