ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಕೊಂದ ಪತ್ನಿ.

36

ಬೆಂಗಳೂರು: ಪ್ರಿಯಕರನ ಮೂಲಕ ಪತಿಯನ್ನು ಕೊಲೆ ಮಾಡಿದ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯನ್ನು ಕೊಲೆ ಮಾಡಿದ ಬಳಿಕ ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ಮಹಿಳೆ ಸಹಿತ ಐವರು ಆರೋಪಿಗಳನ್ನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗರತ್ನ, ರಾಮ್, ಶಶಿಕುಮಾರ್, ಚಿನ್ನ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ.
ಇದೇ ತಿಂಗಳ ಅಕ್ಟೋಬರ್ 14ರಂದು ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋಗಿದ್ದ ತಿಪ್ಪೇಶ ಭೋಗನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಪತಿಯ ಶವದ ಮುಂದೆ ಕಣ್ಣೀರಿಟ್ಟಿದ್ದ ನಾಗರತ್ನ, ನನ್ನ ಪತಿಯನ್ನು ಯಾರೋ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ನಾಗರತ್ನ ನೀಡಿದ ದೂರನ್ನು ದಾಖಲಿಸಿಕೊಂಡಿದ್ದ ಬೆಳ್ಳಂದೂರು ಠಾಣೆ ಪೊಲೀಸರು ಅನುಮಾನಗೊಂಡು ನಾಗರತ್ನಳನ್ನು ಕರೆಸಿ ತಮ್ಮ ರೀತಿಯಲ್ಲಿ ವಿಚಾರಣೆ ಕೊಲೆಯ ಅಸಲಿಯತ್ತು ಬಯಲಾಗಿದೆ. ಆರೋಪಿ ರಾಮ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ನಾಗರತ್ನ ಆತನೊಂದಿಗೆ ಶಾಮಿಲಾಗಿ ಮೂಲಕ ತನ್ನ ಪತಿಯ ಕೊಲೆಗೆ ಇತರ ಆರೋಪಿಗಳಿಗೆ ಸುಪಾರಿ ನೀಡಿರುವುದು ತನಿಖೆ ವೇಳೆ ಬಯಲಾಗಿದೆ. ಪ್ರಕರಣದ ಸಂಬಂಧ ಆರೋಪಿ ನಾಗರತ್ನ, ಆಕೆಯ ಪ್ರಿಯಕರ ರಾಮ್, ಇತರ ಆರೋಪಿಗಳಾದ ಶಶಿಕುಮಾರ್, ಸುರೇಶ್ ಹಾಗೂ ಚಿನ್ನ ಎಂಬಾತನನ್ನ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದರು.
ತನ್ನ ಸ್ವಂತ ಸಹೋದರಿಯ ಪತಿ ರಾಮ್ ಜೊತೆಗೆ ಸಂಬಂಧ ಹೊಂದಿದ್ದ ನಾಗರತ್ನ, ತನ್ನ ಗಂಡ ತನಗೆ ಕಿರುಕುಳ ನೀಡುತ್ತಿದ್ದಾನೆ ಆತನನ್ನ ಕೊಲೆಮಾಡಿ ನನ್ನನ್ನ ಕರೆದುಕೊಂಡು ಹೋಗು ಎಂದು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ರಾಮ್ ಬಳಿ ಹೇಳಿದ್ದಳು. ಅದರಂತೆ ರಾಮ್ ಹಾಗೂ ಆತನ ಸ್ನೇಹಿತರು ತಿಪ್ಪೇಶನನ್ನು ಕೊಲೆ ಮಾಡಿದ್ದರು. ನಾಗರತ್ನ ನೀಡಿದ್ದ ದೂರು ಆಧರಿಸಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕೊಲೆ ಮಾಡಿದ್ದ ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನು ಆಧರಿಸಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ನಾಗರತ್ನಳ ಪಾತ್ರ ಕೊಲೆಯಲ್ಲಿ ಇದೆ ಎಂಬ ಸತ್ಯ ಬಯಲಾಗಿದೆ.