ದಿನಕರ್ ತೂಗುದೀಪ ಅವರು ನಿರ್ದೇಶಕನಾಗಿ, ನಿರ್ಮಾಪಕನಾಗಿ, ಬರಹಗಾರನಾಗಿ ಮತ್ತು ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರು ನವಗ್ರಹ ಸಿನಿಮಾ ನಿರ್ದೇಶನ ಮಾಡಿ ಭರ್ಜರಿ ಯಶಸ್ಸನ್ನು ಕಂಡಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಆ ನಂತರ ದರ್ಶನ್ ನಟನೆಯ ಸಾರಥಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ ಈ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗೋಕೆ ರೆಡಿ ಆಗಿದ್ದಾರೆ ಎಂದು ತಿಳಿಸಲಾಗಿದೆ. ಈ ವಿಷಯವನ್ನು ಕೇಳಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ರಾಯಲ್ ಎಂಬ ಸಿನಿಮಾವನ್ನೂ ಕೂಡ ದಿನಕರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮಾಧ್ಯಮಗೋಷ್ಠಿ ನಡೆದಿದ್ದು, ಈ ವೇಳೆ ಅವರಿಗೆ ದರ್ಶನ್ ಕುರಿತು ಪ್ರಶ್ನೆ ಕೇಳಿದಾಗ ದಿನಕರ್ ಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತಿದೆ. ಇದರ ಬಗ್ಗೆ ಮಾತನಾಡಿದ ನಿರ್ದೇಶಕ ದಿನಕರ್ ತೂಗುದೀಪ ರವರು, ಅಣ್ಣ ತಮ್ಮ ಬೇರೆ ಆಗಿದ್ದೀವಿ ಎಂದು ಯಾರು ಹೇಳಿದ್ದು, ಗಂಡ ಹೆಂಡತಿ ಮಧ್ಯೆ ಹೇಗೆ ಜಗಳ ಇರುತ್ತದೆಯೋ ಹಾಗೆ ಅಣ್ಣ ತಮ್ಮ ಎಂದ ಮೇಲೆ ಜಗಳ ಇದ್ದೇ ಇರುತ್ತದೆ ಎಂದು ಹೇಳಿದರು. ನಾವು ಮಾತನಾಡುತ್ತಲೇ ಇರುತ್ತೇವೆ. ತಿಂಗಳಿಗೊಮ್ಮೆ ನಮ್ಮ ಮಧ್ಯೆ ಮಾತುಕತೆ ನಡೆಯುತ್ತನೇ ಇರುತ್ತದೆ. ಹಾಗೂ ಅತ್ತಿಗೆ ವಿಜಯಲಕ್ಷ್ಮೀ ಜೊತೆ ಕೂಡ ಕಾಂಟ್ಯಾಕ್ಟ್‍ನಲ್ಲಿದ್ದೀನಿ. ಈ ಚಿತ್ರಕ್ಕೆ ದರ್ಶನ್ ಸಾಥ್ ಕೊಡಬಹುದು. ಸದ್ಯಕ್ಕೆ ಅವರಿಗೆ ಬೆನ್ನು ನೋವಿದೆ. ಇದರ ಟ್ರೀಟ್‍ಮೆಂಟ್‍ಗಾಗಿ ಮೈಸೂರಿಗೆ ಹೋಗಿದ್ದಾರೆ. ಅಜಯ್ ಹೆಗಡೆ 2 ಬಾರಿ ಟ್ರೀಟ್‍ಮೆಂಟ್ ಮಾಡಲಾಗಿದೆ. ಈ ಕಾರಣಕ್ಕೆ ಅಲ್ಲಿಯೇ ಟ್ರೀಟ್‍ಮೆಂಟ್ ನಡೆಯುತ್ತಿದೆ ಎಂದು ನಿರ್ದೇಶಕ ದಿನಕರ್ ತೂಗುದೀಪ ವರದಿ ತಿಳಿಸಿದ್ದಾರೆ.










