ನಮ್ಮೂರಿಗೆ ರಸ್ತೆ ಮಾಡಿಸಿಕೊಡಿ ಎಂದು ಕೇಳಿದ್ದಕ್ಕೆ ಯುವಕನ ಕಪಾಳಕ್ಕೆ ಹೊಡೆದ ಶಾಸಕ!

59
firstsuddi

ತುಮಕೂರು : ನಮ್ಮೂರಿಗೆ ರಸ್ತೆ ಮಾಡಿಸಿಕೊಡಿ ಎಂದು ಯುವಕನೊಬ್ಬ ಮನವಿ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪಾವಗಡ ಶಾಸಕ ವೆಂಕಟರಮಣಪ್ಪ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಶಾಸಕ ವೆಂಕಟರಮಣಪ್ಪ ಅವರು ಪಾವಗಡ ತಾಲೂಕು ಕಚೇರಿ ಆವರಣದಿಂದ ಕಾರಿನ ಬಳಿ ಬರುತ್ತಿದ್ದಂತೆ ಯುವಕನೊಬ್ಬ ನಮ್ಮೂರಿಗೆ ರಸ್ತೆ ಇಲ್ಲ, ಶೀಘ್ರವೇ ರಸ್ತೆ ಕಾಮಗಾರಿ ಆರಂಭಿಸಬೇಕೆಂದು ಮನವಿ ಮಾಡಿದ್ದಾನೆ. ಇದನ್ನು ಕೇಳಿದಾಕ್ಷಣ ಇದ್ದಕ್ಕಿದ್ದಂತೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಪೊಲೀಸರಿಗೆ ಹೇಳಿ ಒಳಗೆ ಹಾಕಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ.

ಶಾಸಕ ವೆಂಕಟರಮಣಪ್ಪ ಅತ್ತ ಕಾರಿನಲ್ಲಿ ತೆರಳುತ್ತಿದ್ದಂತೆ ಯುವಕ ‘ದೊಡ್ಡವರು ಎಂದು ಸುಮ್ಮನಿದ್ದೇನೆ. ಇಲ್ಲದಿದ್ದರೆ ನಾನೂ ಎರಡು ಬಿಗಿಯುತ್ತಿದ್ದೆ ಎಂದು ನೋವನ್ನು ಹೊರ ಹಾಕಿದ್ದಾನೆ.