ನಾನು ಗೂಂಡಾಗಿರಿ ಮಾಡ್ತಿದ್ದೆ, ಕಾಪಿ ಹೊಡೆಯುವುದರಲ್ಲಿ ಪಿಹೆಚ್‌ಡಿ ಮಾಡಿದ್ದೇನೆ : ಸಚಿವ ಶ್ರೀರಾಮುಲು.

68
firstsuddi

ಬಳ್ಳಾರಿ : ನಾನು ಗೂಂಡಾಗಿರಿ ಮಾಡ್ತಿದ್ದೆ, ತುಂಬಾ ಜಗಳ ಮಾಡ್ತಿದ್ದೆ. ಬಡವರ ಪರವಾಗಿ ನಿಂತು ಜಗಳವಾಡಿ 14-15 ಬಾರಿ ಜೈಲಿಗೂ ಹೋಗಿದ್ದೆ ಎಂದು ಸಚಿವ ಶ್ರೀರಾಮುಲು ಶಾಲಾ-ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ವೀರಶೈವ ವಿದ್ಯಾವರ್ಧಕ ಸಂಘದ ಎಸ್ ಜಿ ಕಾಲೇಜಿನ ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಪರೀಕ್ಷೆಯಲ್ಲಿ ಕಾಪಿ ಹೊಡೆದು ಪಾಸಾಗಿದ್ದೇನೆ, ಕಾಪಿ ಹೊಡೆಯುವುದರಲ್ಲಿ ಪಿಹೆಚ್ ಡಿ ಮಾಡಿದ್ದೇನೆ . ಬಡವರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಗೂಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದ್ದೆ. ಅದಕ್ಕಾಗಿ ಜೈಲಿಗೂ ಹೋಗಿ ಬಂದಿದ್ದೇನೆ. ನಮ್ಮಪ್ಪ ವಕೀಲರ ಬಳಿ ಬೇಲ್ ಕೇಳೋದಕ್ಕೆ ಹೋದಾಗಲೆಲ್ಲಾ ಎಷ್ಟು ಬಾರಿ ಬೇಲ್ ಕೊಡಬೇಕು ಅವನಿಗೆ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ನಾನು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋದ್ರೆ ಹುಡುಗೀರೆಲ್ಲಾ ನನ್ನನ್ನೇ ನೋಡ್ತಿದ್ರು. ಆದ್ರೆ ನಾನು ಬೇರೆಕಡೆ ಹೋಗಿ ಮಾತನಾಡುತ್ತಿರಲಿಲ್ಲ. ನಮ್ಮೂರಿನಲ್ಲಿ ಮಾತ್ರ ಮಾತನಾಡುತ್ತಿದ್ದೆ. ಇಂತಹ ನೆನಪುಗಳನ್ನು ನಾವು ಮರೆಯಬಾರದು ಎಂದು ಮುಗುಳ್ನಕ್ಕರು.