ಪತ್ನಿಯನ್ನೇ ಕೊಂದ ಪತಿರಾಯ.! ವಾರದ ಬಳಿಕ ಪ್ರಕರಣ ಬೆಳಕಿಗೆ…

81
firstsuddi

ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದ ಮಹಿಳೆಯ ನಿಗೂಢ ಹತ್ಯೆ ಪ್ರಕರಣ ವಾರದ ಬಳಿಕ ಬೆಳಕಿಗೆ ಬಂದಿದ್ದು, ಇದೀಗ ಪತಿರಾಯ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರಕರಣದ ಹಿನ್ನಲೆ :

ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ನಿವಾಸಿ ಷಡಕ್ಷರಿಯನ್ನು ಒಂದೂವರೆ ವರ್ಷದ ಹಿಂದಷ್ಟೇ ಸಂಧ್ಯಾ(23) ಎಂಬುವವರು ಮದುವೆಯಾಗಿದ್ದರು. ಆದರೆ ಇವರ ದಾಂಪತ್ಯದಲ್ಲಿ ಬಿರುಕು ಉಂಟಾಗಿ, ಇತ್ತೀಚೆಗೆ ಗಂಡ, ಹೆಂಡತಿ ದೂರವಾಗಿದ್ರು. ತಂದೆಯ ಮನೆಯಲ್ಲಿದ್ದುಕೊಂಡು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಆದರೆ ನವೆಂಬರ್ 16ರಂದು ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ನಾಪತ್ತೆಯಾಗಿದ್ದರು. ಮಗಳು ಮನೆಗೆ ಬಾರದ ಹಿನ್ನಲೆ ಬೆಳಕವಾಡಿ ಪೊಲೀಸ್ ಗೆ ತಂದೆ ನಾಪತ್ತೆ ದೂರು ನೀಡಿದ್ದರು. ಇತ್ತ ಪತಿ ಷಕಡ್ಷರಿ ವಿಷ ಸೇವಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೇರಿದ್ದ.

ಪೊಲೀಸರು ಆತ ಆಸ್ಪತ್ರೆಯಿಂದ ಬಿಡುಗಡೆಯಾಗುವರೆಗೂ ಕಾದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಆರಂಭದಲ್ಲಿ ತನಗೇನು ಗೊತ್ತೇ ಇಲ್ಲ ಎನ್ನುತ್ತಿದ್ದ ಷಡಕ್ಷರಿ ಪೊಲೀಸರ ಟ್ರಿಟ್ಮೆಂಟ್ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ.

ಪತಿ ಷಕಡ್ಷರಿ, ಕಂಪ್ಯೂಟರ್ ಕ್ಲಾಸ್ ನಿಂದ ಪತ್ನಿಯನ್ನು ಕರೆದುಕೊಂಡು ಬಂದು ಕೊಲೆ ಮಾಡಿ ಕುಂದೂರು ಬಳಿಯ ನಾಲೆಗೆ ಹಾಕಿದ್ದ. ಬಳಿಕ, ಪ್ರಕರಣದಿಂದ ತಪ್ಪಿಸಿಕೊಳ್ಳಲು ವಿಷ ಸೇವಿಸಿ ತಾನೇ ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.