ಪಿಕ್ ಪಾಕೆಟರ್‍ನನ್ನು ಬೆನ್ನಟ್ಟಿ ಹಿಡಿದ ಮೂಡಿಗೆರೆ ಪೊಲೀಸರು…

976
firstsuddi

ಮೂಡಿಗೆರೆ : ಜುಲೈ 31ರಂದು ಉದ್ಯಮಿ ಸಿದ್ದಾರ್ಥ್ ಅವರ ಪಾರ್ಥೀವ ಶರೀರ ಮೆರವಣಿಗೆಯಲ್ಲಿ ಕಣಚೂರು ನಯನ್ ಎಂಬುವವರ ಪರ್ಸ್ ಪಿಕ್ ಪಾಕೆಟ್ ಮಾಡಿ ಪರಾರಿಯಾಗಿದ್ದ ಆರೋಪಿ ಭದ್ರಾವತಿ ಮೂಲದ ಪರಮೇಶ್ ಎಂಬಾತನನ್ನು ಬಂಧಿಸುವಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಜಗನ್ನಾಥ್ ಹಾಗೂ ಸಬ್ ಇನ್ಸ್ಪೆಕ್ಟರ್ ರಮೇಶ್ ಅವರ ತಂಡ ಯಶಸ್ವಿಯಾಗಿದೆ. ಮೆರವಣಿಗೆಯಲ್ಲಿ ಸಾರ್ವಜನಿಕರು ತೆಗೆದ ವೀಡಿಯೋ ಸಹಾಯದಿಂದ ಹಾಗೂ ಭದ್ರಾವತಿ ಪೊಲೀಸ್ ಮಾಹಿತಿದಾರರ ಸಹಾಯದಿಂದ ಆರೋಪಿಯನ್ನು ಬಂಧಿಸಿ ಆರೋಪಿಯಿಂದ 25ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂಧಿಗಳಾದ ಗಿರೀಶ್, ಅನ್ವರ್ ಪಾಷಾ, ತೇಜು ಮೂರ್ತಿ, ವಿಜಯ್ ಕುಮಾರ್ ಅವರು ಪಾಲ್ಗೊಂಡಿದ್ದರು.