ಪುನೀತ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ ಅಲ್ಲು ಅರ್ಜುನ್.

88
firstsuddi

ಬೆಂಗಳೂರು : ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಅಪ್ಪು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಅಲ್ಲು ಅರ್ಜುನ್ ಮೊದಲಿಗೆ ನಾಗಾವರದಲ್ಲಿರುವ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದರು. ಬಳಿಕ ಶಿವಣ್ಣನ ಜೊತೆ ಸದಾಶಿವ ನಗರದಲ್ಲಿರುವ ಅಪ್ಪು ಮನೆಗೆ ಭೇಟಿ ನೀಡಿದರು. ಮನೆಯಲ್ಲಿ ಅಪ್ಪು ಫೋಟೋಗೆ ನಮಿಸಿದ ಅಲ್ಲು ಅರ್ಜುನ್ ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು. ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರಗೂ ನಮಸ್ಕಾರ. ಪುನೀತ್ ರಾಜ್ ಕುಮಾರ್ ಅವರ ಫ್ಯಾಮಿಲಿಯನ್ನು ಭೇಟಿ ಮಾಡಿದೆ. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಆಗ್ತಾ ಇದ್ದೆ. ಅವರು ಹೈದರಾಬಾದ್ ಗೆ ಬಂದಾಗ ನನ್ನ ಭೇಟಿ ಆಗ್ತಾ ಇದ್ರು. ‘ಅಲಾ ವೈಕುಂಟಪುರಮುಲೋ’ ಸಿನಿಮಾ ನೋಡಿದ ಬಳಿಕ ಪುನೀತ್ ನನಗೆ ಕರೆ ಮಾಡಿ, ‘ಬುಟ್ಟಾ ಬೊಮ್ಮಾ’ ಸೇರಿದಂತೆ ಎಲ್ಲಾ ಹಾಡುಗಳು ಚೆನ್ನಾಗಿದೆ ಎಂದು ಹೇಳಿದ್ರು. ಆ ಬಳಿಕ ನಾವು ಭೇಟಿ ಆಗಬೇಕು ಅಂದುಕೊಂಡಿದ್ವಿ. ಆದ್ರೆ ಕೋವಿಡ್ ಲಾಕ್ ಡೌನ್ ನಿಂದ ಸಾಧ್ಯವಾಗಿರಲಿಲ್ಲ. ನನಗೆ ಪುನೀತ್ ಡ್ಯಾನ್ಸ್ ಇಷ್ಟವಾಗುತ್ತಿತ್ತು. ಪುನೀತ್ ನೆನಪೇ ಇಂದು ಶಾಶ್ವತ ಎಂದು ಹೇಳಿದ್ದಾರೆ.