ಬಿಎಂಟಿಸಿ ನೌಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ…

87
firstsuddi

ಬೆಂಗಳೂರು : ವಜಾಗೊಂಡ ಬಿಎಂಟಿಸಿ ನೌಕರರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಂದಿರಾನಗರದ ಡಿಪೋ-6ರ ಬಳಿ ಡಿಪೋ ಮ್ಯಾನೇಜರ್ ಮುಂದೆಯೇ ಬಿಎಂಟಿಸಿ ನೌಕರ ಕೇಶವ ವಿಷ ಸೇವಿಸಿದ್ದಾರೆ. ಹಳೆ ಬಯ್ಯಪ್ಪನಹಳ್ಳಿಯಲ್ಲಿ ವಾಸವಾಗಿದ್ದ ಕೇಶವ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಕೇಶವ ಅವರನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇಶವ ಡಿಪೋ-6ರಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಏಪ್ರಿಲ್ ನಲ್ಲಿ ನಡೆದ ಮುಷ್ಕರದ ವೇಳೆ ಅವರು ವಜಾಗೊಂಡಿದ್ದರು. ಹೀಗಾಗಿ ಕೇಶವ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗ್ತಿದೆ.