ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡಲ್ಲ : ಸಚಿವ ಲಕ್ಷ್ಮಣ ಸವದಿ.

97
Firstsuddi

ಬೆಂಗಳೂರು : ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿ ನಾಲ್ಕು ನಿಗಮಗಳಿವೆ. ಸರ್ಕಾರದ ಸಾರಿಗೆ ಬಳಸುವುದು ಬಡ ಮಧ್ಯಮವರ್ಗದ ಜನತೆ ಮಾತ್ರ. ಈಗಾಗಲೇ ಕೋವಿಡ್ ಪರಿಸ್ಥಿತಿ, ಲಾಕ್ ಡೌನ್ ನಿಂದ ನಾಗರಿಕರು ಕಷ್ಟದಲ್ಲಿದ್ದಾರೆ. ಮತ್ತೆ ಕಷ್ಟ ಕೊಡಲು ಹೋಗಲ್ಲ. ಹೀಗಾಗಿ ಪ್ರಯಾಣ ದರ ಏರಿಕೆ ಮಾಡುವುದಿಲ್ಲ. ಅಧಿಕಾರಿಗಳು ದರ ಹೆಚ್ಚಳದ ಪ್ರಸ್ತಾವನೆ ಕೊಟ್ಟಿದ್ದಾರೆ. ಮುಂದೆ ನೋಡೋಣ ಅಂತಾ ಇದ್ದೇವೆ ಎಂದರು.

ಇನ್ನೂ ಲಾಕ್ ಡೌನ್ ಮುಗಿದ ಬಳಿಕ ಹಂತ ಹಂತವಾಗಿ ಸಾರಿಗೆ ಸೇವೆ ಆರಂಭ ಮಾಡುತ್ತೇವೆ. ಎರಡೂ ಡೋಸ್ ಲಸಿಕೆ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ಬಳಸಲಾಗುವುದು ಎಂದು ಹೇಳಿದರು.