ಚಿಕ್ಕಮಗಳೂರು : ಅಹಿಂಸಾ ತತ್ವ ಪ್ರತಿಪಾದಕ ಭಗವಾನ್ ಶ್ರೀ ಗೌತಮ ಬುದ್ಧನ ಜಯಂತಿಯನ್ನು ನಗರದ ಬಿಎಸ್ಪಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇಂದು ಸಂಭ್ರಮದಿಂದ ಆಚರಿಸಿದರು.
ಜಯಂತಿ ಅಂಗವಾಗಿ ಬುದ್ಧನ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ. ಸುಧಾ. ಸಕಲ ರಾಜ ವೈಭೋಗಗಳನ್ನೂ ತ್ಯಜಿಸಿ ಜಗತ್ತಿಗೆ ಸತ್ಯ ಮತ್ತು ಅಹಿಂಸಾ ತತ್ವವನ್ನು ಬೋಧಿಸಿದ ಮಹಾನ್ ಮಾನವತಾವಾದಿ ಗೌತಮ ಬುದ್ಧ ಎಂದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ ಬುದ್ಧನ ತತ್ವ ಮತ್ತು ಸಿದ್ಧಾಂತಗಳು, ಸಾರ್ವಕಾಲಿಕ ಸತ್ಯಗಳು ಅವುಗಳನ್ನು ಸರ್ಕಾರ ಸಾರಾಸಗಟಾಗಿ ಒಪ್ಪಿ ಅಳವಡಿಸಿಕೊಂಡಲ್ಲಿ ಆರೋಗ್ಯವಂತ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಬುದ್ಧ ಜನಿಸಿದ ದೇಶದಲ್ಲಿ ಅಹಿಂಸೆ ತಾಂಡವಾಡುತ್ತಿರುವುದು ದುರಂತ ಎಂದ ಅವರು ಎಲ್ಲರೂ ಈ ನಿಟ್ಟಿನಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪಕ್ಷದ ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ವಸಂತ ಅಧ್ಯಕ್ಷತೆ ವಹಿಸಿದ್ದರು, ಸಂಯೋಜಕಿ ಕೆ.ಎಸ್. ಮಂಜುಳಾ ಮಾಜಿ ಅಧ್ಯಕ್ಷ ಕುಮಾರ್, ಸಿದ್ದಯ್ಯ, ಹೊನ್ನಪ್ಪ, ರತ್ನ, ವಿಜಯಕುಮಾರ್, ಮಂಜುಳಾ ಉಪಸ್ಥಿತರಿದ್ದರು.










