ಹೈದರಾಬಾದ್ : ಟಾಲಿವುಡ್ ನಟ ಸಾಯಿ ಧರಂ ತೇಜ್ ಅವರ ಬೈಕ್ ಹೈದ್ರಾಬಾದ್ನ ಮಾದಾಪುರ್ ಕೇಬಲ್ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿದೆ.
ನಿನ್ನೆ ರಾತ್ರಿ 8.30ರ ಸುಮಾರಿಗೆ ಸಾಯಿಧರ್ಮ ತೇಜ್ ಸ್ಪೋರ್ಟ್ಸ್ ಬೈಕ್ ನಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಸಾಯಿಧರ್ಮ ತೇಜ್ ಬಲಗಣ್ಣು ಹಾಗೂ ಎದೆ ಭಾಗ, ಭುಜ, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸದ್ಯ ಹೈದ್ರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಅಲ್ಲು ಅರವಿಂದ್ ಸೇರಿದಂತೆ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. 24 ಗಂಟೆ ನಿಗಾವಹಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಪಘಾತ ಸಂಬಂಧ ರಾಯದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










