ಚೆನ್ನೈ : ಭವಿಷ್ಯದಲ್ಲಿ ಮತ್ತೊಮ್ಮೆ ರಾಜಕೀಯಕ್ಕೆ ಬರುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಾವು ಸ್ಥಾಪಿಸಿದ್ದ ಮಕ್ಕಲ್ ಮಂದಿರಂ (ಆರ್ ಎಂಎಂ) ಪಕ್ಷವನ್ನು ತೊರೆದಿದ್ದು, ಈ ಸಂಘಟನೆಯನ್ನು ದತ್ತಿ ನಿಧಿ ಸಂಸ್ಥೆಯನ್ನಾಗಿ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ, ಶೂಟಿಂಗ್ ನಡೆಯಬೇಕಾದರೆ ರಜನಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಅವರು, ರಾಜಕೀಯಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದರು. ಆ ಬಳಿಕ ಅಭಿಮಾನಿಗಳು ಈ ನಿರ್ಧಾರವನ್ನು ಬದಲಿಸುವಂತೆ ಒತ್ತಡ ಹೇರುತ್ತಲೇ ಬಂದಿದ್ದರು. ಆ ವೇಳೆ ರಜನಿ ಅವರು ಮತ್ತೆ ಮತ್ತೆ ನನಗೆ ನೋವುಂಟು ಮಾಡಬೇಡಿ ಎಂದು ಮನವಿ ಮಾಡಿದ್ದರು.










