ಭಾರತೀಯ ಮೂಲದ ಕಾಶ್ ಪಟೇಲ್ ಎಫ್‍ಬಿಐನ ನಿರ್ದೇಶಕರಾಗಿ ಆಯ್ಕೆ.

61

ವಾಷಿಂಗ್ಟನ್: ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‍ನ ನೂತನ ನಿರ್ದೇಶಕರಾಗಿ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿದೆ. ಇದರೊಂದಿಗೆ ಎಫ್‍ಬಿಐ ಮುಖ್ಯಸ್ಥರಾದ ಮೊದಲ ಭಾರತೀಯ ಎಂಬ ಹಿರಿಮೆಗೆ ಕಾಶ್ ಪಟೇಲ್ ಪಾತ್ರರಾಗಿದ್ದಾರೆ. ಸೆನೆಟ್‍ನಲ್ಲಿ 51-49 ಮತಗಳ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ ಪಟೇಲ್ ಅವರನ್ನು ಎಫ್‍ಬಿಐನ 9ನೇ ನಿರ್ದೇಶಕರನ್ನಾಗಿ ದೃಢಪಡಿಸಿದರು. ಪಟೇಲ್ ಎಫ್‍ಬಿಐ ನ್ನು ಹೆಚ್ಚು ಪಾರದರ್ಶಕವಾಗಿಸುವ ಗುರಿಯನ್ನು ಹೊಂದಿದ್ದಾರೆ.
ಟ್ರಂಪ್ ನಿಷ್ಠಾವಂತ ಕಾಶ್ ಪಟೇಲ್ ಅವರು ಈಗ ಮುನ್ನಡೆಸಲಿರುವ ಎಫ್‍ಬಿಐಯನ್ನು ತೀವ್ರವಾಗಿ ಟೀಕಿಸಿದ್ದರು. ಕಳೆದ ಒಂದು ತಿಂಗಳಿನಿಂದ ನ್ಯಾಯ ಇಲಾಖೆಯು ಹಿರಿಯ ಬ್ಯೂರೋ ಅಧಿಕಾರಿಗಳ ಗುಂಪನ್ನು ಹೊರಹಾಕಿರುವುದರಿಂದ, ಜ.6, 2021 ರಂದು ಯುಎಸ್ ಕ್ಯಾಪಿಟಲ್‍ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ತನಿಖೆಗಳಲ್ಲಿ ಭಾಗವಹಿಸಿದ ಸಾವಿರಾರು ಏಜೆಂಟ್‍ಗಳ ಹೆಸರುಗಳಿಗೆ ಅತ್ಯಂತ ಅಸಾಮಾನ್ಯ ಬೇಡಿಕೆಯನ್ನು ಮಾಡಿರುವುದರಿಂದ ಎಫ್ ಬಿಐಯಲ್ಲಿ ಪರಿಸ್ಥಿತಿ ಸರಿಯಾಗಿಲ್ಲ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‍ನಲ್ಲಿ ಮತದಾನದ ನಂತರ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಪಟೇಲ್ ಅವರು ಅತಿದೊಡ್ಡ ಪರಂಪರೆಯನ್ನು ಹೊಂದಿರುವ ಸಂಸ್ಥೆಯಾದ ಎಫ್‍ಬಿಐನ ಒಂಬತ್ತನೇ ನಿರ್ದೇಶಕರಾಗಿ ದೃಢೀಕರಿಸಲ್ಪಟ್ಟಿರುವುದು ಗೌರವವಾಗಿದೆ ಎಂದು ಬರೆದಿದ್ದಾರೆ.