ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ತನಗೆ ಲಭಿಸಿದ ಹುದ್ದೆ ಅದೊಂದು ವರದಾನ ಎಂಬಂತೆ ಭಾವಿಸಿಕೊಂಡು ಆ ಮೂಲಕ ಜನಸೇವೆ ಮಾಡುವ ಕಾರ್ಯದಲ್ಲಿ ತೃಪ್ತಿ ಕಂಡ ಕೆಲವೇ ಮಂದಿ ಪ್ರಾಮಾಣಿಕ ಪೋಲಿಸ್ ಉನ್ನತಾಧಿಕಾರಿಗಳಲ್ಲಿ ಪಶ್ಚಿಮ ವಲಯದ ಅತ್ಯಂತ ದಕ್ಷ ಐಜಿಪಿ ದೇವಜ್ಯೋತಿ ರೇ ಒಬ್ಬರಾಗಿದ್ದಾರೆ.
ಸರಕಾರ ತನಗೆ ಕೆಲಸ ಕೊಟ್ಟಿದೆ ಸಂಬಳ ಕೊಡುತ್ತಾ ಇದೆ’ ಅದಕ್ಕಾಗಿ ಕೆಲಸ ಮಾಡಬೇಕು ಎಂಬ ನೀತಿ ಪೋಲೀಸ್ ಅಧಿಕಾರಿಗಳಲ್ಲಿ ಹೆಚ್ಚಿನವರಲ್ಲಿ ಇರುವಂತಹದು, ಆದರೆ ಶ್ರೀ ದೇವಜ್ಯೋತಿ ರೇ ಇದಕ್ಕೆ ಅಪವಾದವಾಗಿದ್ದಾರೆ. ಸರಕಾರ ತನಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿಯೂ ‘ಪ್ರಾಮಾಣಿಕವಾಗಿಯೂ ನಿರ್ವಹಿಸಿ ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಿಕೊಂಡು ದೇಶ ಸೇವೆ ಮಾಡಬೇಕೆಂಬ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿರುವ ಶ್ರೀ ದೇವಜ್ಯೋತಿ ರೇ ಇದೀಗ ಪಶ್ಚಿಮ ವಲಯದ ಐಜಿಪಿಯಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಸೇವೆ ಸಲ್ಲಿಸಿದ ಕೊಡಗು, ಉಡುಪಿ, ಪುತ್ತೂರು ಸಹಿತ ಎಲ್ಲಾ ಸ್ಥಳಗಳಲ್ಲೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ್ದಾರೆ. ‘ಎಲ್ಲೆಲ್ಲ ಕೋಮು ಗಲಭೆಯಾಗಿದೆಯೋ , ಎಲ್ಲೆಲ್ಲ ಗುಂಪು ಗಲಭೆ ಯಾಗಿದೆಯೋ, ಎಲ್ಲಿ ಕೊಲೆ , ದರೋಡೆ ನಡೆದಿದೆಯೋ ಅಲ್ಲಿಗೆ ಸಮರ್ಥರಾದ ಪೋಲಿಸ್ ಅಧಿಕಾರಿಗಳನ್ನು ಐಜಿಪಿ ದೇವಜ್ಯೋತಿ ರೇ ಯವರು ಕಳುಹಿಸಿಕೊಡುತ್ತಾರೆ .
ಅಹಂಭಾವದ ಅರಿವಿಲ್ಲದ ಶ್ರೀಯುತ ದೇವಜ್ಯೋತಿ ರೇ ತನ್ನ ಪ್ರಾಮಾಣಿಕ ಕಾರ್ಯ ದಕ್ಷತೆಗಳಿಂದ ಜನತೆ ಮತ್ತು ಸರಕಾರದ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ .ಶ್ರೀಯುತ ದೇವಜ್ಯೋತಿ ರೇ ಯವರು ಇನ್ನಷ್ಟು ಹುದ್ದೆಗಳಿಗೆ ಬಡ್ತಿ ಹೊಂದಿ ಇಲಾಖೆಗೆ ಕೀರ್ತಿ ತರಲಿ ಎಂಬುದು ಜನರ ಹಾರೈಕೆ.










