ಮಂಗಳೂರು : ಹನಿ ಟ್ರ್ಯಾಪ್ ಪ್ರಕರಣ ಬೇಧಿಸಿದ ಸುರತ್ಕಲ್ ಪೊಲೀಸರು – ನಾಲ್ವರ ಬಂಧನ…

116
firstsuddi

ಮಂಗಳೂರು : ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ಕೃಷ್ಣಾಪುರ 6 ನೇ ಬ್ಲಾಕ್ ಪರಿಸರದ ಮಠ ರಸ್ತೆಯ ಸಮೀಪದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ತನ್ನ ವ್ಯವಹಾರಕ್ಕಾಗಿ ವಾಸ್ತವ್ಯ ಹೂಡಿದ ಆರೋಪಿಗಳ ಪೈಕಿ ಅರೋಪಿ ಶ್ರೀಮತಿ ರೇಶ್ಯಾಥಿ ನೀಮಾ ಮತ್ತು ಆರೊಪಿ ಶ್ರೀಮತಿ ಜೀನತ್ ಈ ಜೀನತ್ ಮುಬೀನ್ ಜನರನ್ನು ಸಾಮಾಜಿಕ ಜಾಲತನದ ಮೂಲಕ ಪರಿಚಯಿಸಿಕೊಂಡು ಅವರ ಸ್ನೇಹ ಬೆಳೆಸಿ ಬಳಿಕ ಅವರನ್ನು ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಅಹ್ವಾನಿಸಿ , ಮನೆಗೆ ಬಂದವರನ್ನು ಉಳಿದ ಆರೋಪಿಗಳಾದ ಇಸ್ಟಾಲ್ ಮಹಮ್ಮದ್ ಅಲ್ಟಾಲ್ ಮತ್ತು ಶ್ರೀ ನಾಸಿಫ್ ಥಿ ಅಬ್ದುಲ್ ಖಾದರ್ ನಾಜೀಪ್ ಸಹಾಯದಿಂದ ಬೆದರಿಸಿ ಹಲ್ಲೆ ನಡೆಸಿ ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಸುರತ್ಕಲ್ ಪೋಲಿಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 16ರಂದು ಸಾಮಾಜಿಕ ಜಾಲತಾಣದ ಮೂಲಕ ಕೇರಳ ಮೂಲದವರನ್ನು ಇದೇ ರೀತಿ ಬ್ಲಾಕ್ ಮೇಲ್ ಮಾಡಿ ಅವರಿಂದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಅವರು ನೀಡಿದ ದೂರಿನ ಅನ್ವಯ ಸುರತ್ಕಲ್ ಪೋಲಿಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂದಿಸಿರುತ್ತಾರೆ. ಬಂಧಿತ ಆರೋಪಿಗಳಿಂದ ಮೊಬೈಲ್ ಫೋನ್, ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ ಆಯುಧ ಹಾಗೂ ವಾಹನವನ್ನು ವಶಪಡಿಸಿರುತ್ತಾರೆ. ಆರೋಪಿ ಜೀನತ್ ಹಾಗೂ ಅವರ ಗಂಡ ಆರೋಪಿ ಇಕ್ವಾಲ್ ರವರು ಕಾನ-ಕಟ್ಟಾ ಪರಿಸರದ ಫ್ಲೋರೆಂಟೈನ್ ಅಪಾರ್ಟೈಂಟ್ಸ್ ನಲ್ಲಿ ವಾಸ್ತವ್ಯ ಇದ್ದು ಆರೋಪಿ ಶ್ರೀ ನಾಸಿಫ್ ಸೂರಿಂಜೆ ಮೂಲದವನಾಗಿದ್ದು ಪ್ರಸ್ತುತ ಚೊಕ್ಕಬೆಟ್ಟು ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಇವರು ಈ ಹಿಂದೆಯು ಕೂಡ ಮಂಗಳೂರು ಮತ್ತು ಆರೋಪಿಗಳ ಸ್ವಂತ ನಿವಾಸದಲ್ಲಿ ಕೇರಳ ಮೂಲದವರನ್ನು ಕರೆಸಿ ಇದೇ ರೀತಿಯ ಕೃತ್ಯ ಮಾಡಿಕೊಂಡು ಸುಮಾರು ಐದಾರು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿರುತ್ತದೆ ಮತ್ತು ಇವರ ಹಿಂದೆ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ಮೊಲೀಸ್ ಆಯುಕ್ತರಾದ ಹರಿರಾಮ್ ಶಂಕರ್ ಐ.ಪಿ.ಎಸ್ (ಕಾ&ಸು) ಮತ್ತು ಉಪ ಪೊಲೀಸ್ ಆಯುಕ್ತರಾದ ಶ್ರೀ ವಿನಯ್ ಗಾಂವ್ಕರ್ (ಅಪರಾಧ & ಸಂಚಾರ) ರವರ ನಿರ್ದೇಶನದಂತೆ ಸಹಾಯಕ ಮೊಲೀಸ್ ಆಯುಕ್ತರು, ಉತ್ತರ ಉಪವಿಭಾಗ ಶ್ರೀ ಬೆಳ್ಯಪ್ಪ ಮತ್ತು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಚಂದ್ರಪ್ಪ ಕೆ, ಮತ್ತು ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.