ಮದುವೆಗೆ ನಿರಾಕರಿಸಿದ ಮಾಜಿ ಪ್ರೇಯಸಿಗೆ ಚಾಕು ಇರಿದ ಆಟೋ ಚಾಲಕ…

79
firstsuddi

ಬೆಂಗಳೂರು : ಮದುವೆಗೆ ನಿರಾಕರಿಸಿದ ಮಾಜಿ ಪ್ರೇಯಸಿಗೆ ವ್ಯಕ್ತಿಯೊಬ್ಬ ಚಾಕು ಇರಿದ ಘಟನೆ ನಗರದಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದವಳನ್ನು ಕದಿರಯ್ಯನ ಪಾಳ್ಯದ ನಿವಾಸಿ ಅಮುದಾ ಎಂದು ಗುರುತಿಸಲಾಗಿದ್ದು, ಆಟೋ ಚಾಲಕ ನವಾಝ್ ಚಾಕು ಇರಿದ ಆರೋಪಿ. ಸದ್ಯ ಪೊಲೀಸರು ಆತ ಹಾಗೂ ಆತನ ಸಹಚರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೆಲ ವರ್ಷಗಳ ಹಿಂದೆ ಅಮುದಾ ಹಾಗೂ ನವಾಝ್ ಪ್ರೀತಿಸುತ್ತಿದ್ದರು. ಈ ನಡುವೆ ನವಾಝ್ ಬೇರೆಯವರ ಜೊತೆ ಮದುವೆಯಾಗಿದ್ದ. ಇತ್ತ ಅಮುದಾ ಕೂಡ ಏಳುಮಲೈ ಎಂಬಾತನ ಜೊತೆ ಮದುವೆಯಾಗಿದ್ದಳು. ನಂತರ ಮತ್ತೆ ಪರಸ್ಪರ ಸಂಪರ್ಕಕ್ಕೆ ಬಂದಿದ್ದ ಮಾಜಿ ಪ್ರೇಮಿಗಳು. ಈ ವೇಳೆ ನವಾಝ್, ನಿನ್ನ ಪತಿ ಸರಿ ಇಲ್ಲ ಎರಡನೇ ಮದ್ವೆಯಾಗು ಎಂದಿದ್ದ. ಆದರೆ ಇದಕ್ಕೆ ಅಮುದಾ ನಿರಾಕರಿಸಿದ್ದಳು.

ಈ ವಿಷಯ ತಿಳಿದ ಏಳುಮಲೈ ತನ್ನ ಪತ್ನಿಯನ್ನು ತೊರೆದಿದ್ದರು. ಹೀಗಾಗಿ ಅಮುದಾ ಒಂದು ವರ್ಷದ ಹಿಂದೆ ಕದಿರಯ್ಯನ ಪಾಳ್ಯದಲ್ಲಿರುವ ತನ್ನ ತಾಯಿಯ ಮನೆಗೆ ಮರಳಿದ್ದಳು. ಆದರೂ, ನವಾಝ್ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದ. ಶುಕ್ರವಾರ ರಾತ್ರಿ ಆತ ಮನೆಗೆ ಹೋಗಿ ಅಮುದಾ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಹೊರಗೆ ಬರುವಂತೆ ಬಾಗಿಲು ತಟ್ಟಿದ್ದಾನೆ. ಆದರೆ, ಅವರು ನಿರಾಕರಿಸಿದ್ದಾರೆ.
ಸುಮಾರು ಒಂದು ಗಂಟೆಯ ನಂತರ, ಆಕೆ ತನ್ನ ಮಕ್ಕಳಿಗೆ ಚಿಪ್ಸ್ ತರಲು ಹೋದಾಗ ನವಾಜ್ ಆಕೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮುಖ, ಕುತ್ತಿಗೆ ಮತ್ತು ಬೆನ್ನಿಗೆ ಇರಿದು ಬೈಕ್ ನಲ್ಲಿ ಸಹಚರನೊಂದಿಗೆ ಪರಾರಿಯಾಗಿದ್ದಾನೆ.