ಮಾಜಿ ಸಿಎಂ ಆದವರು ಹೇಗೆ ಮಾತಾಡಬೇಕು ಅಂತ ಗೊತ್ತಿಲ್ವಾ : ಹೆಚ್ ಡಿಕೆ ವಿರುದ್ಧ ಸುಮಲತಾ ಕಿಡಿ…

89
firstsuddi

ಬೆಂಗಳೂರು : ಕೆಆರ್ ಎಸ್ ರಕ್ಷಣೆ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಮಂಡ್ಯಕ್ಕೆ ಇಂಥ ಸಂಸದರು ಬಂದಿಲ್ಲ, ಬರೋದಿಲ್ಲ. ಕೆಆರ್ ಎಸ್ ಅನ್ನು ಇವರೇ ರಕ್ಷಣೆ ಮಾಡುತ್ತಾರಂತೆ. ಕೆಆರ್ ಎಸ್ ರಕ್ಷಣೆಗಾಗಿ ಇವರನ್ನೇ ಜಲಾಶಯದ ಗೇಟ್ ಬಳಿ ಮಲಗಿಸಿದರೆ ಎಲ್ಲವೂ ಸರಿಯಾಗಲಿದೆ. ಮಂಡ್ಯದ ಮೈ ಶುಗರ್ ಖಾಸಗೀಕರಣಕ್ಕೆ ಒತ್ತಡ ಇದೆಯಾ ಅಂತ ಅವರನ್ನೇ ಕೇಳಬೇಕು. ಮೊನ್ನೆ ಯಾವುದೋ ಸಭೆಯಲ್ಲಿ ಕೆಆರ್ ಎಸ್ ಇವರೇ ರಕ್ಷಣೆ ಮಾಡ್ತಿರುವ ಹಾಗೇ ಹೇಳಿಕೆ ಕೊಟ್ಟಿದ್ದಾರೆ. ಕೆಲಸ ಎಲ್ಲಿ ಮಾಡಬೇಕು ಎನ್ನುವ ಮಾಹಿತಿ ಇರದೆ, ಯಾರದ್ದೋ ವೈಯಕ್ತಿಕ ದ್ವೇಷದ ಮೇಲೆ ಹೇಳಿಕೆ ಕೊಡುವುದು ಬಹಳ ದಿನ ನಡೆಯಲ್ಲ. ಯಾವುದೋ ಅನುಕಂಪದಲ್ಲಿ ಗೆದ್ದು ಬಂದಿದ್ದಾರೆ. ಅದಕ್ಕಾಗಿ ಇವರು ಜನತೆಯ ಋಣ ತೀರಿಸುವ ಕೆಲಸ ಮಾಡಬೇಕು. ಪದೇಪದೆ ಅಂತಹ ಅವಕಾಶಗಳು ದೊರಕುವುದಿಲ್ಲ. ದೊರಕಿದ ಅನುಕಂಪವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜನರೇ ಮುಂದೆ ಪಾಠ ಕಲಿಸಲಿದ್ದಾರೆ ಎಂದು ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದ್ದರು.

ಈ ಮಾತಿಗೆ ತಿರುಗೇಟು ನೀಡಿರುವ ಸಂಸದೆ ಸುಮಲತಾ ಅವರು, ಹೀಗೆ ಹಗುರವಾಗಿ ವೈಯಕ್ತಿಕ ಟೀಕೆ ಮಾಡೋದು ಯಾವ ಸಂಸ್ಕಾರ. ಮಾಜಿ ಸಿಎಂ ಆದವರು ಹೇಗೆ ಮಾತನಾಡಬೇಕು ಅಂತ ಗೊತ್ತಿಲ್ವಾ? ಯಾವ ಮಾತು ಆಡಬೇಕು, ಯಾವ ಮಾತು ಆಡಬಾರದು ಅನ್ನೋ ಜ್ಞಾನ ಅವರಿಗೆ ಇಲ್ವಾ? ಇಂತಹ ವೈಯಕ್ತಿಕ ಟೀಕೆಗಳು ನನ್ನ ಮೇಲೆ ಪರಿಣಾಮ ಬಿರೋದಿಲ್ಲ. ನಾನು ಯಾವತ್ತು ಅಂತಹ ಲೆವೆಲ್ ಗೆ ಹೋಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಹೆಚ್ ಡಿಕೆಗೆ ತಿರುಗೇಟು ಕೊಟ್ಟರು.

ಮೈಶುಗರ್ ಅನ್ನು ಯಾವುದಾದರು ಒಂದು ಮಾಡೆಲ್ ನಲ್ಲಿ ಪ್ರಾರಂಭ ಮಾಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದೆ. ನನ್ನ ಸಲಹೆ ಪಡೆದು ಸರ್ಕಾರ ನಿರ್ಧಾರ ಮಾಡಿದೆ ಅನ್ನೋ ಅಷ್ಟು ಪವರ್ ನನಗೆ ಇಲ್ಲ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡಿದ್ರು ಅಂತ ಗೊತ್ತಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾಕೆ ಮೈ ಶುಗರ್ ಪ್ರಾರಂಭ ಮಾಡಿಲ್ಲ. ಸಿಎಂ ಆಗಿದ್ದಾಗ ಅವರು ಏನು ಮಾಡಿದ್ರು. 400 ಕೋಟಿ ಅಕ್ರಮ ಆಗಿದೆ ಅಂತ ಹೇಳಿದ್ರು. ರೈತರ ಪರವಾಗಿ ಆ ಕಾರ್ಖಾನೆ ಪ್ರಾರಂಭ ಆಗಬೇಕು. ಯಾವುದಾದರು ಒಂದು ಮಾದರಿಯಲ್ಲಿ ಕಾರ್ಖಾನೆ ಓಪನ್ ಮಾಡಲಿ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿ. ಎಲ್ಲರ ಜೊತೆ ಮಾತಾಡಿ ನಾನು ಕಾರ್ಖಾನೆ ಪ್ರಾರಂಭ ಮಾಡಿ ಅಂತ ಮನವಿ ಮಾಡಿದ್ದೇನೆ. ನಾನು ಖಾಸಗೀಕರಣ ಮಾಡಿ ಅಂತ ಹೇಳಿಲ್ಲ. ಅಂತ ಮೂರ್ಖ ಕೆಲಸ ನಾನು ಮಾಡೊಲ್ಲ ಎಂದು ವಾಗ್ದಾಳಿ ನಡೆಸಿದರು.

ಕೆಆರ್ ಎಸ್ ಬಿರುಕು ವಿಚಾರವಾಗಿ ಮಾತನಾಡಿದ ಅವರು, ತನಿಖೆ ಮಾಡಬೇಕು ಅಂತ ನಾನು ಒತ್ತಾಯ ಮಾಡ್ತೀನಿ. ಕುಮಾರಸ್ವಾಮಿ ಅವರಿಗೆ ಯಾಕೆ ಈ ಆತಂಕ ಗೊತ್ತಿಲ್ಲ. ಕುಮಾರಸ್ವಾಮಿ ಮಾತಿನಿಂದ ಅವರ ಸಂಸ್ಕಾರ, ಅವರ ವ್ಯಕ್ತಿತ್ವ ಏನು ಅಂತ ತೋರಿಸುತ್ತಿದ್ದಾರೆ ಎಂದು ಹೆಚ್ ಡಿಕೆ ವಿರುದ್ದ ಸುಮಲತಾ ಕಿಡಿಕಾರಿದ್ದಾರೆ.