ಮಂಡ್ಯ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ದರೋಡೆ ಮಾಡುವುದಕ್ಕೆ ನಾನು ಹೇಳಿದ್ನಾ? ಇದಕ್ಕೆಲ್ಲಾ ನಾನು ಹೊಣೆನಾ? ಎಂಬ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ಚಾಮಿ ಅವರು ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಒಕ್ಕಲಿಗ ಸಮಾಜದ ನಾಯಕರು ಹಾಗೂ ಯುವಕರು ನಾನು ಹೋರಾಟಕ್ಕೆ ಹೋಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ದೂಷಣೆ ಮಾಡುತ್ತಿದ್ದಾರೆ. ಡಿಕೆಶಿ ಅವರಿಗೆ ದರೋಡೆ ಮಾಡಲು ನಾನು ಹೇಳಿದ್ನಾ? ದರೋಡೆ ಮಾಡಿ ಆ ಹಣವನ್ನು ಸಾರ್ವಜನಿಕವಾಗಿ ಹಂಚುತ್ತಿದ್ದಾರಾ? ಇದಕ್ಕೆಲ್ಲಾ ನಾನು ಹೊಣೆನಾ? ನಾನು ಆ ಸಭೆಗೆ ಯಾಕೆ ಹೋಗಬೇಕಿತ್ತು? ಎಂಬ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಆರೋಪಿಸಿದ್ದು, ಬಳಿಕ ಇದು ಎಷ್ಟು ಸತ್ಯ, ಎಷ್ಟು ನಿಜ ಎಂಬುವುದು ನನಗೆ ತಿಳಿದಿಲ್ಲ. ಹೀಗಾಗಿ ಸತ್ಯ ತಿಳಿಯದೇ ನಾನು ಮಾತನಾಡುವುದು ಸರಿಯಲ್ಲ ಎಂದರು.










