ಮೂಡಿಗೆರೆಯ ಹೆಸಗಲ್ ಗ್ರಾಮದಲ್ಲಿ500 ವರ್ಷಗಳ ಹಿಂದೆ ಬಸವ ಕಲ್ಲಾದ ಕಥೆ ನಂಬೋಕೆ ಅಸಾಧ್ಯವಾದ್ರು ಇದು ಸತ್ಯ…

3166
  • ರಾಘವೇಂದ್ರ ಕೆಸವಳಲು.

ಹಿಂದೂ ಧರ್ಮದ ಒದೊಂದು ಘಟನೆ ಹಾಗೂ ಸತ್ಯಕ್ಕೂ ಒದೊಂದು ಇತಿಹಾಸವಿದೆ. ಆಸ್ತಿಕತೆಯ ಕೆಲ ಔಚಿತ್ಯಗಳು ಸತ್ಯಕ್ಕೆ ಹತ್ತಿರವಿದ್ರೆ, ಕೆಲವು ಮನುಷ್ಯನ ಕಲ್ಪನೆಗೂ ಮೀರಿದ್ದಾಗಿವೆ. ಆದ್ರೆ, ಕೇಳೋರಿಗೆ ಈ ಸ್ಟೋರಿ ತುಸು ಭಿನ್ನವಾದ್ರು, 500 ವರ್ಷಗಳಿಂದ ಜನರ ನಂಬಿಕೆಯ ಪ್ರತಿಬಿಂಬವಾಗಿದೆ. ಈ ಘಟನೆಯನ್ನ ನೋಡಿರೋರಿಲ್ಲ. ಕೇಳಿರೋರೆ ಎಲ್ಲಾ. ನೀವೂ ಈ ಕಥೆ ಕೇಳಿದ್ರೆ, ಅಬ್ಬಾ… ಅನ್ನೋದ್ರ ಜೊತೆ ದೇವರ ಮಹಿಮೆ ಇರಬಹುದು ಅಂತೀರಾ. ಧರ್ಮವಂತರ ಕಾಲದ ಪುರಾತನವಾದ ಸತ್ಯ ಹಾಗೂ ನಂಬಿಕೆ ಹೇಗಿದೆ ನೋಡಿ…….

ದೇವಾಲಯಗಳಿಗೆ ಬಸವನನ್ನ ಹೋರಿ ಬಿಡೋ ಸಂಪ್ರದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದ್ರೆ, ಇತಿಹಾಸದಲ್ಲೆಲ್ಲೂ ಕಂಡು ಕೇಳರಿಯದ ಸತ್ಯಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗಿದೆ. ಹೌದು, ಈ ಕಲ್ಲಿನ ರಾಶಿಯನ್ನ ನೀವು ನೋಡಿದ್ರೆ ಕಲ್ಲು ಗುಡ್ಡೆ ಅಂತೀರಾ. ಆದ್ರೆ, ಇದು ಬಸವನ ಮಾಂಸ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಸಗಲ್ ಗ್ರಾಮದಲ್ಲಿ ನಿಂತು ನೋಡಿದ್ರೆ, ಕಲ್ಲಿನ ರಾಶಿಯಲ್ಲಿ ಬಸವನ ತಲೆ ಆಕಾರವಿದೆ. 500 ವರ್ಷಗಳ ಹಿಂದೆ ಕಣಿವೆ ಬಸವೇಶ್ವರ ಸ್ವಾಮಿಯ ಬಸವ ರೈತರ ಬೆಳೆಯನ್ನೆಲ್ಲಾ ತಿಂದ್ರೆ, ಬೆಳಗಾಗೋದ್ರಲ್ಲಿ ಬೆಳೆ ಬೆಳೆದಿರುತ್ತಿತ್ತು. ಬಸವ ತಿನ್ನದಿದ್ರೆ ಇನ್ನೆಷ್ಟು ಬೆಳೆಯಬಹುದೆಂದು ಅದು ಮಲಗಿದ್ದಾಗ ಯಾರೋ ಕಡಿದಿದ್ದಾರೆ. ಕೂಡಲೇ ಊರಿಗೆ ಬೆಂಕಿ ಬಿದ್ದಿದೆ ಎಂದು ಊರಿಗೆ ಹೋಗಿ ನೋಡಿದ್ರೆ ಏನೂ ಇರಲಿಲ್ಲ. ನಮ್ಮ ಬೆಳೆಯನ್ನ ತಿನ್ನುತ್ತಿದ್ದ ಬಸವನನ್ನ ಸಾಯಿಸಿದೆ ಎಂದು ಜನ ಬಂದು ನೋಡುವಷ್ಟರಲ್ಲಿ ಊರಿನ ಜನ ದಿಗ್ಬ್ರಾಂತರಾಗಿದ್ರು.

firstsuddi

ಹೀಗೆ ಊರಿನ ಜನ ಬಸವನನ್ನ ಬಂದು ನೋಡುವಷ್ಟರಲ್ಲಿ ಅದೆಲ್ಲಾ ಮಲ್ಲಿಗೆ ಹೂವಿನ ರಾಶಿಯಾಗಿತ್ತಂತೆ. ಕೂಡಲೇ ಜನ ಗಾಬರಿಗೊಂಡು ಊರಿನ ಹಿರಿಯರನ್ನ ಕರೆತರುವಷ್ಟರಲ್ಲಿ ಆ ಮಲ್ಲಿಗೆ ಹೂವಿನ ರಾಶಿ ಕಲ್ಲು ಗುಡ್ಡೆಯಾಗಿತ್ತಂತೆ. ಅಂದಿನಿಂದ ಇಂದಿನವರೆಗೂ ಈ ಬಸವನಾಕಾರದ ತಲೆ ಹಾಗೂ ಮಾಂಸದ ಕಲ್ಲು ಗುಡ್ಡೆ ಹಾಗೇ ಇದೆ ಅನ್ನೋದು ಜನರ ನಂಬಿಕೆ. ಮಲಗಿದ್ದ ಬಸವನನ್ನ ಕತ್ತರಿಸಿದ್ರಿಂದ ಅದೇ ಬಸವ ಸಮೀಪದ ಹಾಂದಿ ಬಳಿಯ ಎಳೆಗುಡಿಗೆ ಗ್ರಾಮದಲ್ಲಿ ಕಲ್ಲು ಒಡೆದು ಮೂಡಿದ್ಯಂತೆ. ಅಂದಿನಿಂದಲೂ ಈ ಬಸವನ ಮಾಂಸದ ಕಲ್ಲುಗುಡ್ಡೆಗೆ ಜನ ಪೂಜೆ ಮಾಡ್ತಾ ಬಂದಿದ್ದಾರೆ. ಮಳೆಯಾಗದೇ ಇದ್ದಾಗ ಇಲ್ಲಿ ಪೂಜೆ ಮಾಡಿದ್ರೆ ಮಳೆ ಬರೋದ್ರಿಂದ ಈ ಬಸವನನ್ನ ಮಳೆ ದೇವರೆಂದೂ ಕರೆಯುತ್ತಾರೆ. ಈ ಬಸವನ ಮಾಂಸದ ಕಲ್ಲು ರಾಶಿಗೆ ಅಂದಿನಿಂದಲೂ ಒಂದು ಮಾವಿನ ಮರ ನೆರಳಾಗಿ ನಿಂತಿದೆ. ಆ ಮರಕ್ಕೂ 500 ವರ್ಷಗಳ ಇತಿಹಾಸವಿದಿಯಂತೆ.

ಒಟ್ಟಾರೆ, ನಿಜಕ್ಕೂ ಈ ಕಥೆ ಧರ್ಮ ಹಾಗೂ ದೇವರೆಂಬ ನಂಬಿಕೆಗೆ ಪುಷ್ಠಿ ನೀಡಿದೆ. ಭಕ್ತರು ಅಂದಿನಿಂದಲೂ ಪೂಜೆ-ಪುನಸ್ಕಾರ ಮಾಡಿ ವರ್ಷಕ್ಕೊಮ್ಮೆ ಅನ್ನಸಂತರ್ಪಣೆ ನಡೆಸ್ತಿದ್ದಾರೆ. ಈ ದೇವಾಲಯದ ಅಭಿವೃದ್ಧಿಗೆಂದು ಇದ್ದ 12 ಎಕರೆ ಜಮೀನನ್ನು ಜನ ಒತ್ತುವರಿ ಮಾಡ್ಕೊಂಡು ನಾಲ್ಕು ಎಕರೆ ಉಳಿಸಿದ್ದಾರೆ. ಇದನ್ನ ಪ್ರವಾಸಿ ತಾಣವನ್ನಾಗಿಸ್ಬೇಕೆಂದು ಸ್ಥಳಿಯರು ಎಷ್ಟೆ ಪ್ರಯತ್ನಿಸಿದ್ರು ಸಾಧ್ಯವಾಗ್ತಿಲ್ಲ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಜಮೀನನ್ನ ಉಳಿಸಿಕೊಂಡು ಈ ದೇವಾಲಯವನ್ನ ಅಭಿವೃದ್ಧಿಪಡಿಸಬೇಕೆಂಬುದು ಸ್ಥಳಿಯರ ಒತ್ತಾಸೆ…..