ಮೂಡಿಗೆರೆ : ಅನ್ಯಕೋಮಿನ ವ್ಯಕ್ತಿಯಿಂದ ಧಾರ್ಮಿಕ ಭಾವನೆಗೆ ಧಕ್ಕೆ-ಬಾಳೂರು ಗ್ರಾಮಸ್ಥರಿಂದ ಠಾಣೆಗೆ ದೂರು ಸಲ್ಲಿಕೆ…

326
firstsuddi

ಬಣಕಲ್: ಅನ್ಯಕೋಮಿನ ವ್ಯಕ್ತಿಯೊಬ್ಬರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಬಾಳೂರು ಗ್ರಾಮಸ್ಥರಿಂದ ಬಾಳೂರು ಠಾಣೆಗೆ ದೂರು ಸಲ್ಲಿಸಲಾಯಿತು.
ಬಾಳೂರು ಗ್ರಾಮಸ್ಥ ಬಿ.ಎಂ ಭರತ್ ಅವರು ಮಾತನಾಡಿ ಬಾಳೂರಿನ ಶ್ರೀಕಲಾನಾಥೇಶ್ವರ ದೇವಸ್ಥಾನಕ್ಕೆ ಅನ್ಯಕೋಮಿನ ವ್ಯಕ್ತಿಯೊಬ್ಬರು ಹಾಗೂ ಅವರ ಕೆಲಸದವರು ಪಾದರಕ್ಷೆಯನ್ನು ಹಾಕಿಕೊಂಡು ವರಾಂಡದಲ್ಲಿ ನಡೆದಾಡುತ್ತಿದ್ದು ಹಲವು ಬಾರಿ ಪಾದರಕ್ಷೆ ಹಾಕಿಕೊಂಡು ದೇವಸ್ಥಾನದ ವರಾಂಡದಲ್ಲಿ ನಡೆಯದಂತೆ ತಿಳಿಸಿದರು. ಮತ್ತೆ ಮತ್ತೆ ಅದನ್ನೆ ಮುಂದುವರಿಸುತ್ತಿದ್ದು ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಬಾಳೂರು ಗ್ರಾಮಸ್ಥ ಬಿ.ಎಂ ಕೃಷ್ಣೆಗೌಡ ಅವರು ಮಾತನಾಡಿ ಪಾದರಕ್ಕೆ ದೇವಸ್ಥಾನದ ವರಾಂಡ ಪ್ರವೇಶಿಸಿರುವುದರಿಂದ ದೇವಸ್ಥಾನ ಅಪವಿತ್ರವಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಾಳೂರು ಗ್ರಾಮಸ್ಥರು ಠಾಣೆಯ ಮುಮದೆ ಪ್ರತಿಭಟನೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶ್ರೀ ಕಲ್ಲಾನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಬಿ.ಎಂ ನಾಗೇಶ್ ಅವರು ಮಾತನಾಡಿ ಧಾರ್ಮಿಕ ಶ್ರದ್ದಾಕೇಂದ್ರಗಳ ಮೇಲೆ ಧರ್ಮದ ಜನರಿಗೆ ಭಾವನಾತ್ಮಕವಾದ ಸಂಬಂಧವಿದೆ. ಅಂತಹ ದೇವಸ್ಥಾನಗಳು ಅಪವಿತ್ರಗೊಳುವುದನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಾಳೂರು ಗ್ರಾಮಸ್ಥರಾದ ಶಿವಶರಣ್, ನಟೆಶ್, ಕಲ್ಲೇಶ್, ರಾಮಚಂದ್ರೆಗೌಡ, ಸತೀಶ್, ಜಗದೀಶ್, ಕಲ್ಲೇಶ್, ಬಿ.ಬಿ ಮಂಜುನಾಥ್, ನಾರಾಯಣಗೌಡ, ವರ್ಣೇಶ್, ಸುಧಾಕರ್, ಪುಚ್ಚಿ, ಸುದೀರ್, ನವೀನ್, ಆದರ್ಶ್ ಬಾಳೂರು, ಮನೋಜ್, ತಿಲಕ್, ಮದನ್, ಸುಪ್ರೀ, ಪ್ರಭಾಕರ್, ವಿಶ್ವನಾಥ್, ಗ್ರಾ.ಪಂ ಸದಸ್ಯ ಪೂರ್ಣೇಶ್ ಮುಂತಾದವರು ಇದ್ದರು.