ಮೂಡಿಗೆರೆ : ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು…

267
firstsuddi

ಮೂಡಿಗೆರೆ : ಪಟ್ಟಣದಲ್ಲಿ ಜಾನುವಾರುಗಳ ಹಾವಳಿ ಅತಿಯಾಗಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಪ.ಪಂ ಮುಖ್ಯಾಧಿಕಾರಿ ಕೃಷ್ಣೇಗೌಡ ಅವರು ತಮ್ಮ ಸಿಬ್ಬಂಧಿಗಳ ಸಹಕಾರದಿಂದ ಜಾನುವಾರು ಮಾಲಿಕರು ತಮ್ಮ ತಮ್ಮ ಮನೆಯಲ್ಲೆ ಜಾನುವಾರುಗಳನ್ನು ಕಟ್ಟಿಹಾಕುವಂತೆ ತಿಳಿಸಿದ್ದರೂ ಐದು ಜಾನುವಾರುಗಳು ಬೀದಿಗಳಲ್ಲಿ ಅಲೆಯುತ್ತಿದ್ದವು. ತಕ್ಷಣವೇ ಐದು ಜಾನುವಾರುಗಳನ್ನು ಕಛೇರಿಯ ಆವರಣದಲ್ಲೆ ಕೂಡಿಹಾಕಿದ್ದರು. ಆದರೆ ಜಾನುವಾರುಗಳ ಮಾಲೀಕರು ಬಾರದೇ ಇರುವ ಕಾರಣ ಆ ಜಾನುವಾರುಗಳನ್ನು ಹಾಸನ ಜಿಲ್ಲೆಯ ಬಾಣಾವಾರದ ಶ್ರೀ ಭಗವಾನ್ ಗೋಶಾಲೆ ಟ್ರಸ್ಟ್ ಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಹಸು, ಎರಡು ಹೋರಿಗಳಿದ್ದು ಅವುಗಳನ್ನು ಜೋಪಾನವಾಗಿ ಬಿಟ್ಟು ಬಂದಿದ್ದು, ಇನ್ನು ಮುಂದಿನ ದಿನಗಳಲ್ಲಿ ಪಟ್ಟಣದ ಬೀದಿಗಳಲ್ಲಿ ಜಾನುವಾರುಗಳು ಓಡಾಡುವುದು ಕಂಡರೆ ಅವುಗಳನ್ನು ಗೋಶಾಲೆಗೆ ಕಳುಹಿಸುವುದಾಗಿ ಮುಖ್ಯಾಧಿಕಾರಿ ಕೃಷ್ಣೇಗೌಡ ಅವರು ಎಚ್ಚರಿಕೆ ನೀಡಿದರು. ಕೆಲವು ಮಾಲೀಕರು ಹಸುವಿನ ಹಾಲನ್ನು ಕರೆದುಕೊಂಡು ನಂತರ ಅವುಗಳನ್ನು ರಸ್ತೆಗೆ ಬಿಡುತ್ತಿರುವುದೇ ವಾಹನಗಳ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಕೆಲವು ಅಪರಿಚಿತರು ರಾತ್ರಿ ಸಮಯದಲ್ಲಿ ಬೀದಿಯಲ್ಲಿರುವಂತಹ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವ ಪ್ರಕರಣಗಳು ಹೆಚಾಗಿದ್ದು ಗೋವುಗಳ ರಕ್ಷಣೆ ಪ್ರತಿಯೊಬ್ಬರದ್ದಾಗಿದ್ದು ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಗೋಶಾಲೆಗೆ ಕಳಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಡಾಡಿ ದನಗಳ ಹಾವಳಿ ತಡೆಗಟ್ಟಲು ಕಂದಾಯ ನಿರೀಕ್ಷಕರಾದ ಶರತ್ ಕುಮಾರ್, ಮಮತ, ಆರೋಗ್ಯಾಧಿಕಾರಿ ಪ್ರಕಾಶ್, ಸಿಬ್ಬಂಧಿ ಕೃಷ್ಣಯ್ಯ ಅವರಿಗೆ ಸೂಚನೆ ನೀಡಿದ್ದರ ಮೇರೆಗೆ ರಾಸುಗಳನ್ನು ಪಟ್ಟಣ ಪಂಚಾಯಿತಿಯ ಸಮೀಪದಲ್ಲಿ ಕೂಡಿಹಾಕಿದ್ದು. ರಾಸುಗಳ ಮಾಲೀಕರು ಆಗಸ್ಟ್ 24 ರೊಳಗೆ ಕಚೇರಿಗೆ ಬಂದು ಬಿಡಿಸಿಕೊಂಡು ಹೋಗದೇ ಇದ್ದಲ್ಲಿ 25 ರಂದು ಕೂಡಿಟ್ಟಿರುವಂತಹ ರಾಸುಗಳನ್ನು ಗೋಶಾಲೆಗೆ ಕಳುಹಿಸಿಕೊಡುವುದಾಗಿ ಮಾಹಿತಿ ನೀಡಿದ್ದರು ಬಿಡಿಸಿಕೊಂಡು ಹೋಗಲು ಬಾರದೆ ಇರುವ ಕಾರಣ ಗೋಶಾಲೆಗೆ ಕಳುಹಿಸಲಾಗಿದೆ ಎಂದರು.