ಮೂಡಿಗೆರೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರಾದ ಸಿ.ಟಿ.ರವಿ ಹಾಗೂ ಮಾಧುಸ್ವಾಮಿ ಭೇಟಿ…

1248
firstsuddi

ಮೂಡಿಗೆರೆ : ಭಾರಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ನೂತನ ಸಚಿವರಾದ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಾದ ಬಣಕಲ್, ಬಾಳೂರು ಹೊರಟ್ಟಿ ಗ್ರಾಮಗಳಿಗೆ ಭೇಟಿ ನೀಡಿದ್ದು, ಸಚಿವ ಮಾಧುಸ್ವಾಮಿ ಅವರು ಮಲೆನಾಡಿನ ಪರಿಸ್ಥಿತಿ ಕಂಡು ಆಶ್ಚರ್ಯಗೊಂಡಿದ್ದು, ಮನೆ-ಜಮೀನುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ರತನ್ ಕುಮಾರ್ ನೂತನ ಸಚಿವರಿಗೆ ತಾಲ್ಲೂಕಿನಲ್ಲಿ ಹಾನಿಯಾಗಿರುವ ಪ್ರದೇಶಗಳ ಬಗ್ಗೆ ವಿವರಣೆ ನೀಡಿದ್ದು, ಈ ವೇಳೆ ನೂತನ ಸಚಿವರ ಜೊತೆ ಮೂಡಿಗೆರೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ಎಂ.ಕೆ ಪ್ರಾಣೇಶ್ ಹಾಗೂ ಬಿಜೆಪಿ ತಾಲ್ಲೂಕು ಅಧ್ಯಕ್ಷ ದುಂಡುಗ ಪ್ರಮೋದ್ ಅವರು ಸಾಥ್ ನೀಡಿದರು.