ಮೂಡಿಗೆರೆ : ಪಟ್ಟಣದ ವೇಣುಗೋಪಲಸ್ವಾಮಿ ದೇವಾಲಯದಲ್ಲಿ ಸುಮಾರು 100ಕ್ಕೂ ಹೆಚ್ಚು ಭಜರಂಗದಳ ಕಾರ್ಯಕರ್ತರು ದತ್ತ ಮಾಲೆ ಧರಿಸುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಭಜರಂಗದಳ ತಾಲೂಕು ಸಂಯೋಜಕ ಅಜಿತ್ ಜೇನುಬೈಲು ತಾಲೂಕಿನಲ್ಲಿ ಸುಮಾರು 1000ಕ್ಕೂ ಹೆಚ್ಚು ಮಂದಿ ಭಜರಂಗದಳ ಕಾರ್ಯಕರ್ತರಿದ್ದು, ಈ ಬಾರಿ ಅಧಿಕ ಸಂಖ್ಯೆಯಲ್ಲಿ ದತ್ತಮಾಲೆ ಧರಿಸುತ್ತಾರೆ. ಕಾರ್ಯಕ್ರಮದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಾಲುಮರ ಮಹೇಶ್, ವಿಶ್ವ ಹಿಂದೂ ಪರಿಷತ್ ನಗರ ಸಂಚಾಲಕ ಮಧು ಗೌಡ, ಭಜರಂಗದಳ ಸಹ ಸಂಯೋಜಕರಾದ ಸಂತೋಷ್, ಅಭಿಲಾಷ್. ಪ್ರೇಮ್. ಅಭಿ. ಪ್ರದೀಪ್ ಸೇರಿದಂತೆ ಮುಂತಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಉಪ ಸಭಾಪತಿ ಪ್ರಾಣೇಶ್ ಅವರ ಜನುಮ ದಿನದ ಅಂಗವಾಗಿ ಸನ್ಮಾನಿಸಿ ಶುಭ ಹಾರೈಸಲಾಯಿತು.










