ಮೂರನೇ ಹಂತದ ಅನ್ ಲಾಕ್ ; ಇಂದು ಸಂಜೆ ಸಿಎಂ ಮಹತ್ವದ ಸಭೆ…

93
firstsuddi

ಬೆಂಗಳೂರು : ರಾಜ್ಯದಲ್ಲಿ 3ನೇ ಹಂತದ ಅನ್ ಲಾಕ್ ಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ(ಜುಲೈ 5)ದಿಂದ ರಾಜ್ಯದಲ್ಲಿ ಅನ್ ಲಾಕ್ 3.O ಜಾರಿಗೆ ಬರಲಿದ್ದು, ಯಾವುದಕ್ಕೆಲ್ಲ ಅನುಮತಿ ನೀಡಬೇಕು ಎಂಬುದುರ ಬಗ್ಗೆ ಇಂದು ಸಂಜೆ ನಡೆಯಲಿರುವ ಸಿಎಂ ಸಭೆಯಲ್ಲಿ ನಿರ್ಧಾರವಾಗಲಿದೆ.

ಇಂದು ಸಂಜೆ 5.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಯಲಿದ್ದು, ಪಾಸಿಟಿವಿಟಿ ರೇಟ್ ನೋಡಿಕೊಂಡು ಎಲ್ಲಾ ಜಿಲ್ಲೆಗಳನ್ನು ಅನ್ ಲಾಕ್ ಮಾಡುವ ಸಂಭವ ಇದೆ. ಯಾವುದಕ್ಕೆಲ್ಲ ಹೊಸದಾಗಿ ಅವಕಾಶ ನೀಡಬೇಕು, ಯಾವುದಕ್ಕೆಲ್ಲ ನಿರ್ಬಂಧ ಸಡಿಲಿಕೆ ಮಾಡಬೇಕು ಎನ್ನುವ ಕುರಿತು ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಚರ್ಚೆ ನಡೆಸಲಿದ್ದು, ದೇವಸ್ಥಾನ, ಮಾಲ್, ಮಾರುಕಟ್ಟೆ , ಬಾರ್, ಪಬ್, ಕ್ಲಬ್ ಗಳಿಗೆ ಅವಕಾಶ, ವ್ಯಾಪಾರ ವಹಿವಾಟುಗಳಿಗೆ ಸಮಯ ವಿಸ್ತರಣೆ ಸೇರಿದಂತೆ ಯಾವುದಕ್ಕೆಲ್ಲ ಅನುಮತಿ ನೀಡಬೇಕು ಎನ್ನುವ ಕುರಿತು ಇಂದು ಸಂಜೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.