ಧಾರವಾಡ : ಮೇ. 11ನೇ ತಾರೀಖಿನಂದು ಸಂಜೆ ಸಭಾಪತಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಬಳಿಕ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ಅವರು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರುವುದು ಇಲ್ಲಿಯವರೆಗೂ ಯಾವುದೇ ಅಧಿಕೃತವಾಗಿಲ್ಲ. ಭಾರತ ಸರ್ಕಾರದ ಗೃಹ ಮಂತ್ರಿಗಳನ್ನ ಭೇಟಿಯಾಗಿದ್ದೆನೆ. ಮಾತುಕತೆಗಳು ಸಹಜವಾಗಿ ಬರುತ್ತವೆ, ಸಭಾಪತಿ ಆಗಿರುವುದರಿಂದ ಬೇರೆ ಪಕ್ಷದ ಬಗ್ಗೆ ಮಾತಾಡಲು ಬರಲ್ಲ ಎಂದರು.
ಅಮಿತ್ ಶಾ ಅವರು ನನ್ನ ಬಗ್ಗೆ ಕೇಳಿದ್ದರು, ಒಳ್ಳೆ ಹೆಸರು ಇಟ್ಟುಕೊಂಡಿದ್ದೀರಿ ಎಂದು ಹೇಳಿದರು. ಅವರನ್ನು ಭೇಟಿಯಾಗಿದ್ದು ಖುಷಿಯಾಗಿದೆ. ಪರಿಷತ್ ಚುನಾವಣೆ ಟಿಕೆಟ್ ವಿಚಾರವಾಗಿ ಯಾವುದೇ ಚರ್ಚೆಯಾಗಿಲ್ಲ. ಮೇ 11ರವರೆಗೂ ಯಾವುದೇ ರಾಜಕೀಯದ ಬಗ್ಗೆ ಮಾತನಾಡಲ್ಲ ಎಂದರು.










