ರಮೇಶ್ ಜಾರಕಿಹೊಳಿ ಸಿಡಿ ಕೇಸ್ ; ನರೇಶ್ ಗೌಡ, ಶ್ರವಣ್ ಗೆ ನಿರೀಕ್ಷಣಾ ಜಾಮೀನು..!

86
firstsuddi

ಬೆಂಗಳೂರು : ಸಿಡಿ ಕೇಸ್ ನಲ್ಲಿ ಜಾರಕಿಹೊಳಿಗೆ ಬ್ಲಾಕ್ ಮೇಲ್ ಮಾಡಿದ ಆರೋಪ ಪ್ರಕರಣದಲ್ಲಿ, ಮಾಜಿ ಪತ್ರಕರ್ತ ನರೇಶ್ ಗೌಡ ಹಾಗೂ ಶ್ರವಣ್ ಗೆ ಕೋರ್ಟ್ ನಿನ್ನೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸಿಡಿ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ನರೇಶ್ ಗೌಡ ಹಾಗೂ ಶ್ರವಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 91ನೇ ಸಿಟಿ ಸಿವಿಲ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸಿಡಿ ಲೀಕ್ ಬಳಿಕ ಕಳೆದ ಮಾರ್ಚ್ 2ರಿಂದ ತಲೆಮರೆಸಿಕೊಂಡಿದ್ದ ನರೇಶ್ ಗೌಡ ಹಾಗೂ ಶ್ರವಣ್ ನನ್ನು ಬಂಧಿಸಲು ತನಿಖಾ ತಂಡ ನಿರಂತರ ಶೋಧಕಾರ್ಯ ನಡೆಸುತ್ತಿತ್ತು. ಅಲ್ಲದೇ ಎಸ್ ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು.

ಆದರೆ ಇದೀಗ ಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.