ಶೀಲ ಶಂಕಿಸಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ…

116
firstsuddi

ಯಾದಗಿರಿ : ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಮಾಧ್ವಾರ ಗ್ರಾಮದಲ್ಲಿ ನಡೆದಿದೆ. ರೇಣುಕಾ ಮೃತ ದುರ್ಧೈವಿ ಎಂದು ಗುರುತಿಸಲಾಗಿದೆ. ಪತಿ ಚೌಡಪ್ಪ ಹಾಗೂ ಪತ್ನಿ ರೇಣುಕಾ ಅವರಿಗೆ ವಿವಾಹವಾಗಿ ಒಂಭತ್ತು ವರ್ಷವಾಗಿದ್ದು, ಒಬ್ಬ ಮಗನೂ ಕೂಡ ಇದ್ದಾನೆ. ಮೃತ ಮಹಿಳೆ ತನ್ನ ಮಗನೊಂದಿಗೆ ಕುರಿ ಮೇಯಿಸಲೆಂದು ಜಮೀನಿಗೆ ತೆರಳಿದ್ದ ವೇಳೆ ಸ್ಥಳಕ್ಕೆ ಬಂದ ಪತಿ ಚೌಡಪ್ಪ ಪತ್ನಿಯ ಮೇಲೆ ಸಲಾಕೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ಕಂಡ ಮಗ ಗಾಬರಿಯಿಂದ ತಾಯಿಯ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.