ಉಡುಪಿ : ಸಂತೋಷ್ ಪಾಟೀಲ್ ಸಂಬಂಧಿಕರು ಬಂದ ನಂತರ ಉಡುಪಿಯಲ್ಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸಂಬಂಧಿಕರು ಬರುವ ತನಕ ನಾವು ಯಾವುದೇ ವಿಧಿ ವಿಧಾನ ಮಾಡುವುದಿಲ್ಲ ಎಂದು ಉಡುಪಿ ಎಸ್‌ಪಿ ವಿಷ್ಣುವರ್ಧನ್ ಅವರು ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂತೋಷ್ ಅವರ ಇಬ್ಬರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಮಂಗಳೂರಿನಿಂದ ಎಫ್ಎಸ್ಎಲ್ ತಂಡ ಬರುತ್ತಿದೆ. ಮೃತರ ಸಂಬಂಧಿಕರು ಬರುತ್ತೇವೆ ಎಂದು ಹೇಳಿದ್ದಾರೆ. ಸಂಬಂಧಿಕರು ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಎಫ್ಎಸ್ಎಲ್ ವರದಿಯ ಬಳಿಕ ಸಂತೋಷ್ ಸಾವಿಗೆ ನಿಖರ ಕಾರಣ ಸಿಗಲಿದೆ ಎಂದು ಹೇಳಿದರು.










