ಬೆಂಗಳೂರು : ಸರ್ಕಾರಿ ಹುದ್ದೆಗಳ ಒಂದೊಂದೇ ಹಗರಣಗಳು ಬಯಲಾಗುತ್ತಿವೆ. ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಇದೀಗ ಮಹಿಳೆಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸೌಮ್ಯ ಎಂಬುವರು ಬಂಧಿತ ಆರೋಪಿ. ನಿನ್ನೆ ಮೈಸೂರಿನಲ್ಲಿ ಇವರನ್ನು ಬಂಧಿಸಿ ಕರೆತಂದಿರುವ ಮಲ್ಲೇಶ್ವರಂ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ನಿನ್ನೆ ಸರ್ಕಾರಿ ರಜೆ ಹಿನ್ನೆಲೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಪೊಲೀಸರು ಇಂದು ಮತ್ತೆ ಕಸ್ಟಡಿಗೆ ಪಡೆದು ಸೌಮ್ಯ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಪಿಹೆಚ್ ಡಿ ಸ್ಟೂಡೆಂಟ್ ಆಗಿದ್ದ ಸೌಮ್ಯಳಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿದ್ದಾದ್ರೂ ಹೇಗೆ?, ಸೌಮ್ಯಳಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗೋದಿಕ್ಕೆ ಕಾರಣ ಯಾರು ಅಂತ ಪೊಲೀಸರು ತನಿಖೆ ಮಾಡಲಿದ್ದಾರೆ.










