ಬೆಂಗಳೂರು : ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಸುಮಾರು 1 ಕೋಟಿ ಮೌಲ್ಯದ 2 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದು, ಇದು ಸಿಸಿಬಿ ಪೊಲೀಸರ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಪ್ರಕರಣವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿದ್ದ ಕೈಸರ್ ಪಾಷಾ(41), ಮೈಸೂರಿನ ಎನ್.ಆರ್. ಪುರದ ಸಮೀರ್(37) ಹಾಗೂ ಚಿಕ್ಕಬಳ್ಳಾಪುರದ ಉದಗೂರಿನ ಇಸ್ಮಾಯಿಲ್ ಷರೀಫ್(38) ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1 ಕೋಟಿ ಮೌಲ್ಯದ 204 ಕೆಜಿ ಗಾಂಜಾ, 1 ಲಾರಿ, 3 ಮೊಬೈಲ್ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










